Header Ads
Header Ads
Breaking News

ಜಾಗತಿಕ ಉಷ್ಣತೆ ಮತ್ತು ಪರಿಸರ ಕುರಿತು ಒಂದು ದಿನ ಕಾರ್ಯಗಾರ : ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಭಾಂಗಣದಲ್ಲಿ ನಡೆದ ಕಾರ್ಯಗಾರ

ಸಂತ ಅಲೋಶಿಸ್ ಸಮೂಹ ಸಂಸ್ಥೆಯ ಅಧೀನದ ಕೊಟೆಕಾರಿನ ಬೀರಿಯಲ್ಲಿ ಕಾರ್ಯಚರಿಸುತ್ತಿರುವ ಸಂತ ಅಲೋಶಿಸ್ ಕಾಲೇಜಿನಲ್ಲಿ ಜಾಗತಿಕ ಉಷ್ಣತೆ ಮತ್ತು ಪರಿಸರ ಕುರಿತು ಒಂದು ದಿನ ಕಾರ್ಯಗಾರ ಕಾಲೇಜಿ ಸಭಾಂಗಣದಲ್ಲಿ ನಡೆಯಿತು. ಸೈಂಟ್ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಅಮೆರಿಕದಲ್ಲಿ ಬಹುರಾಷ್ಟ್ರೀಯ ತೈಲ ಉದ್ಯಮದಲ್ಲಿ ಕಾರ್ಯನಿರ್ವಹಿಸಿದ ಡಾ.ಭಾಮಿ ವಿ. ಶೆಣೈ ರವರು ಜಾಗತಿಕ ಉಷ್ಣತೆ ಮತ್ತು ಪರಿಸರ ಕುರಿತಾಗಿ ಮಾತನಾಡಿ  ನಮ್ಮ ಭೂ ಗ್ರಹದ ಉಷ್ಣತೆ ಏರುತ್ತಾ ಇದೆ. ಜಾಗತಿಕ ಉಷ್ಣತೆಯ ಏರಿಕೆಯ ದುಷ್ಪರಿಣಾಮಗಳನ್ನು ಈಗಾಗಲೇ ನೋಡುತ್ತಿದ್ದೇವೆ. ಅಕಾಲಿಕ ಮಳೆ, ಬರಗಾಲ, ಪ್ರವಾಹ ಮೊದಲಾದ ವಿನಾಶಕಾರಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿವೆ. ಜಾಗತಿಕ ಉಷ್ಣತೆಯ ಏರಿಕೆಯು ಕಾರ್ಬನ್ ಡೈಆಕ್ಸೈಡ್‌ನಂತಹ ಅನಿಲಗಳಿಂದ ಕಾಣಿಸಿಕೊಳ್ಳುತ್ತದೆ ಎಂದು ಅವರು ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಡಾ.ಭಾಮಿ ವಿ. ಶೆಣೈ ಸಂವಾದ ನಡೆಸಿದರು. ಈ ಸಂದರ್ಭ ಸಂಸ್ಥೆಯ ನಿದೇರ್ಶಕ ಫಾದರ್ ಬೆನ್ ಝಿಲ್ ಲೋಬೊ ಉಪಸ್ಥಿತರಿದರು.

 

Related posts

Leave a Reply

Your email address will not be published. Required fields are marked *