Header Ads
Header Ads
Breaking News

ಜಾತಿ, ಮತ ಬೇದಭಾವ ಮರೆತು ಮನುಷ್ಯನಾಗಿ ಬಾಳಬೇಕು: ಖ್ಯಾತ ಸಾಹಿತಿ ಜ್ಯೋತಿ ಗುರುಪ್ರಸಾದ್ ಅಭಿಪ್ರಾಯ

ಕಾರ್ಕಳ : ಮಾನವೀಯ ಮೌಲ್ಯಗಳು ಪ್ರವಾದಿ ಜೀವನದ ಬೆಳಕಿನಲ್ಲಿ ಸ್ನೇಹ ಕೂಟ ಎಂಬ ಕಾರ್ಯಕ್ರಮ ಕಾರ್ಕಳದ ಖಾಸಗಿ ಹೋಟೆಲ್‌ನಲ್ಲಿ ಜರುಗಿತು.

ಈ ಸಂದರ್ಭ ಖ್ಯಾತ ಸಾಹಿತಿ ಜ್ಯೋತಿ ಗುರುಪ್ರಸಾದ್ ಮಾತನಾಡಿ, ಶಾಂತಿ ಸನ್ನಡತೆಗಾಗಿ ಪರಿವರ್ತನೆ ಆಗಬೇಕು ಅದು ಇಸ್ಲಾಂ. ಮಹಮ್ಮದ್ ಪ್ರಾಂಗಬರ್ ಮಹಾನ್ ಪುರುಷ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಯಾಕೆಂದರೆ ಮನುಷ್ಯ ಮನುಷ್ಯನಾಗಿ ಬದುಕಬೇಕು. ಜಾತಿ, ಮತ ಬೇದಭಾವ ಮರೆತು ಬಾಳಬೇಕು ಎಂದು1500 ವರ್ಷಗಳ ಹಿಂದೆ ವಿಶ್ವಕ್ಕೆ ಸಾರಿದ ಪ್ರವಾದಿಯಾಗಿದ್ದಾರೆ ಎಂದು ಹೇಳಿದರು.


ಮೂಡಬಿದ್ರೆ ರೋಟರಿ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಡಿ. ಕೋಸ್ತ ಮಾತನಾಡಿ ಪ್ರವಾದಿಯವರು ಒಬ್ಬ ಅರಸನಾಗಿ ಬಾಳದೆ ಕೇವಲ ಜನರ ಸೇವಕನಾಗಿ ಧರ್ಮ ಪ್ರಚಾರ ಮಾಡಿದರು. ಅವರು ಉತ್ತಮ ಆಡಳಿತಗಾರ ಉತ್ತಮ ಧರ್ಮಪಾಲಕ, ಉತ್ತಮ ಸೈನಿಕ, ಉತ್ತಮ ನ್ಯಾಯಧೀಶರಾಗಿದ್ದರು ಎಂದು ಹೇಳಿದರು.

ಸದ್ಭಾವನ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಡಾ| ರಿಜ್ವಾನ್ ಜಾಹೆದ್ ಹುಸೇನ್ ಉಪಸ್ಥಿತರಿದ್ದರು ಶೌಕತ್ ಅಲಿ ಧನ್ಯವಾದ ಅರ್ಪಿಸಿದರು.

Related posts

Leave a Reply