Header Ads
Header Ads
Breaking News

ಜಾನುವಾರು ಮಾಂಸ ಮತ್ತು ಮಾರಾಟ ನಿಷೇಧ, ಮೇಘಾಲಯ ಬಿಜೆಪಿ ನಾಯಕರಿಂದ ರಾಜೀನಾಮೆ ಬೆದರಿಕೆ

ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶವನ್ನು ರದ್ದು ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಮೇಘಾಲಯದ ಬಹುತೇಕ ಎಲ್ಲ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಬೆದರಿಕೆಯೊಡ್ಡಿದ್ದಾರೆ.
ಮೇಘಾಲಯದ ಹೆಚ್ಚಿನ ಬಿಜೆಪಿ ನಾಯಕರೂ ಗೋಮಾಂಸ ಸೇವಿಸುತ್ತಾರೆ. ಹೊಸ ನಿಯಮ ಬಗ್ಗೆ ಪಕ್ಷದ ಹೆಚ್ಚಿನ ನಾಯಕರ ವಿರೋಧವಿದೆ. ಜನರ ಸಾಮಾಜಿಕ ಆರ್ಥಿಕ ಸ್ಥಿತಿಯ ಮೇಲೆ ಜಾನುವಾರು ಮಾರಾಟ ನಿಷೇಧ ನೇರ ಪರಿಣಾಮ ಬೀರುತ್ತದೆ ಎಂದು ಮೇಘಾಲಯದ ಬಿಜೆಪಿ ಉಪಾಧ್ಯಕ್ಷ ಜಾನ್ ಅಂಟೋನಿಯಸ್ ಲಿಂಗ್ಡೊ ಹೇಳಿದ್ದಾರೆ. ಹೊಸ ನಿಯಮದ ಪರಿಣಾಮದ ಬಗ್ಗೆ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಹೊಸ ನಿಯಮವನ್ನು ನಾವು ಸ್ವೀಕರಿಸಲಾಗದು. ಜಾನುವಾರು ಮಾರಾಟ ಮಾಡುವ ಜನರ ಆರ್ಥಿಕ ಹಿತಾಸಕ್ತಿ ಮತ್ತು ನಮ್ಮ ಆಹಾರ ಸಂಸ್ಕೃತಿಯನ್ನು ನಾವು ವಿರೋಧಿಸಲಾಗದು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅಭ್ಯರ್ಥಿಗಳಿಗೆ ಚುನಾವಣೆ ಪ್ರಚಾರದ ವೇಳೆಯೂ ನಿಯಮದಿಂದ ಸಮಸ್ಯೆಯಾಗಲಿದೆ ಎಂದಿದ್ದಾರೆ. ಮೇಘಾಲಯದಲ್ಲಿ ಹೆಚ್ಚಿನ ಬಿಜೆಪಿ ನಾಯಕರು ಗೋಮಾಂಸ ಸೇವನೆ ಮಾಡುತ್ತಾರೆ ಎಂದು ಪಕ್ಷದ ನಾಯಕ ಬರ್ನಾರ್ಡ್ ಮಾರಾಕ್ ಸೋಮವಾರವೇ ಹೇಳಿದ್ದಾರೆ.

Related posts

Leave a Reply