Header Ads
Header Ads
Breaking News

ಜಾನುವಾರು ಮಾರಾಟ ನಿರ್ಬಂಧ, ವಾಪಾಸಿಗೆ ಕೇರಳ ವಿಧಾನಸಭೆ ನಿರ್ಣಯ

ಮಾರುಕಟ್ಟೆಯಿಂದ ಕಸಾಯಿಖಾನೆಗೆ ಜಾನುವಾರು ಮಾರಾಟ ಮತ್ತು ಖರೀದಿಗೆ ನಿರ್ಬಂಧ ಹೇರಿ ಕೇಂದ್ರ ಪರಿಸರ ಸಚಿವಾಲಯ ಮೇ ೨೩ರಂದು ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವನ್ನು ಸಿಪಿ‌ಎಂ ನೇತೃತ್ವದ ಆಡಳಿತಾರೂಢ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಬೆಂಬಲಿಸಿದವು. ಬಿಜೆಪಿಯ ಏಕೈಕ ಸದಸ್ಯ ರಾಜಗೋಪಾಲ್ ಅವರು ಮಾತ್ರ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು. ಕೇಂದ್ರ ಸರ್ಕಾರದ ಜಾನುವಾರು ಮಾರುಕಟ್ಟೆಗಳ ನಿಯಂತ್ರಣ ನಿಯಮಗಳು-೨೦೧೭ ಅಧಿಸೂಚನೆಯು ರಾಜ್ಯಗಳು, ಕೃಷಿ ಆರ್ಥಿಕತೆ, ಆಹಾರ ಭದ್ರತೆ ಮತ್ತು ಜಾನುವಾರುಗಳ ಮಾರಾಟದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳನ್ನು ಈ ನಿರ್ಣಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಕಾನೂನು ಮತ್ತು ನೀತಿಗಳನ್ನು ರೂಪಿಸುವ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಗೋವು ಮತ್ತು ಎತ್ತುಗಳು ಪವಿತ್ರ ಎಂಬ ಸಿದ್ಧಾಂತವನ್ನು ಜನರ ಮೇಲೆ ಹೇರಲಾಗುತ್ತಿದೆ. ಈ ಸಿದ್ಧಾಂತವು ಡಾರ್ವಿನ್ ಅವರ ವಿಕಾಸವಾದಕ್ಕೂ ಸವಾಲು ಎಸೆದಿದೆ ಎಂದು ಸಿಪಿ‌ಎಂನ ಹಿರಿಯ ಮುಖಂಡ ವಿ. ಎಸ್. ಅಚ್ಯುತಾನಂದನ್ ಹೇಳಿದರು.

Related posts

Leave a Reply