Header Ads
Breaking News

ಜಾರ್ಖಂಡ್ ಮೂಲದ ವ್ಯಕ್ತಿ ಮೋರಿಗೆ ಬಿದ್ದು ಮೃತ್ಯು

ಹೆಜಮಾಡಿ ಎಸ್ ಎಸ್ ರೋಡ್ ಸಮೀಪದ ಬಾಡಿಗೆ ಕೋಣೆಯಲ್ಲಿ ವಾಸವಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯೋರ್ವರು ಸ್ಕೂಟರ್ ಸಹಿತ ಕಳೆದ ತಡರಾತ್ರಿ ಮೋರಿಗೆ ಬಿದ್ದು ಮೃತಪಟ್ಟಿದ್ದಾರೆ.

ಮೃತರು ವಿವಾಹಿತ ಅನ್ಸಾರಿ(30), ಇವರು ಪತ್ನಿ ನಾಲ್ಕು ಮಕ್ಕಳು ಸಹಿತ ತಮ್ಮನೊಂದಿಗೆ ಹೆಜಮಾಡಿ ಎನ್ ಎಸ್ ರೋಡ್ ನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಳೆದ ರಾತ್ರಿ 9ರ ಸುಮಾರಿಗೆ ಸಣ್ಣ ಕೆಲಸವಿದೆ ಎಂಬುದಾಗಿ ಮನೆಯಲ್ಲಿ ಹೇಳಿ ಸ್ಕೂಟರ್ ಏರಿ ಹೋದಾತ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಕೂಡಾ ಸ್ವೀಕರಿಸದ ಕಾರಣ ರಾತ್ರಿ ಒಂದರ ಸುಮಾರಿಗೆ ಅವರ ತಮ್ಮ ಸ್ಥಳೀಯ ನಿವಾಸಿಗಳೊಂದಿಗೆ ಕೂಡಿಕೊಂಡು ಹುಡುಕಾಟ ನಡೆಸಿದ್ದು, ಹೆಜಮಾಡಿ ಗುಂಡಿ ರಸ್ತೆಯಿಂದ ಎನ್ ಎಸ್ ರಸ್ತೆಗೆ ಸಂಪರ್ಕ ಹೊಂದಿದ್ದ ಮಣ್ಣ ರಸ್ತೆಯಾಗಿ ಹುಡುಕಾಡಿದಾಗ ರಸ್ತೆ ಪಕ್ಕದ ಮೋರಿಯಲ್ಲಿ ಸ್ಕೂಟರ್ ಸಹಿತ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾಗಿದ್ದು ತಕ್ಷಣ ಸ್ಥಳೀಯ ಸಿದ್ಧಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಆ ವ್ಯಕ್ತಿ ಮೃತ ಪಟ್ಟಿದ್ದಾರೆ ಎಂಬುದಾಗಿ ಪಡುಬಿದ್ರಿ ಪಿಎಸ್ ಐ ಸುಬ್ಬಣ್ಣ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *