Breaking News

ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ವರ್ಮ, ಬಿಜೆಪಿಯ ರಾಷ್ಟ್ರಪತಿ ಹುರಿಯಾಳು

ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಮಾಧ್ಯಮ ವರದಿಗಳ ಪ್ರಕಾರ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಆಳುವ ಪಕ್ಷ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಪರಿಶೀಲಿಸಲ್ಪಡುತ್ತಿರುವ ಹೆಸರುಗಳಲ್ಲಿ ಒಂದಾಗಿರುವುದಾಗಿ ತಿಳಿದು ಬಂದಿದೆ.
ಬುಡಕಟ್ಟು ನಾಯಕಿಯಾಗಿರುವ ದ್ರೌಪದಿ ಮುರ್ಮು ಅವರು ಜಾರ್ಖಂಡ್ನ ಮೊದಲ ಮಹಿಳಾ ರಾಜ್ಯಪಾರಾಗಿ ೨೦೧೫ರ ಮೇ ೧೮ರಂದು ಅಧಿಕಾರ ವಹಿಸಿಕೊಂಡಿದ್ದರು. ಇವರು ಒಡಿಶಾದಿಂದ ಆಯ್ಕೆಯಾಗಿದ್ದ ಎರಡು ಬಾರಿಯ ಬಿಜೆಪಿ ಶಾಸಕಿಯೂ ಆಗಿದ್ದಾರೆ. ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷೆಯಾಗಿಯೂ ಇವರು ಕರ್ತವ್ಯ ನಿಭಾಯಿಸಿದ್ದರು. ಒಡಿಶಾದಲ್ಲಿ ಈ ಹಿಂದೆ ಬಿಜೂ ಜನತಾ ದಳ ಮತ್ತು ಬಿಜೆಪಿಯ ಸಮ್ಮಿಶ್ರ ಸರಕಾರ ಜಾರಿಯಲ್ಲಿದ್ದಾಗ ಮುರ್ಮು ಅವರು ನವೀನ್ ಪಟ್ಟನಾಯಕ್ ಅವರ ಸಂಪುಟದಲ್ಲಿ ಸಚಿವೆಯಾಗಿದ್ದರು. ೧೯೯೭ರಲ್ಲಿ ನಗರ ಸಭಾ ಸದಸ್ಯೆಯಾಗುವ ಮೂಲಕ ಮುರ್ಮು ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು.
ಈತನಕ ಯಾವುದೇ ಬುಡಕಟ್ಟು ವ್ಯಕ್ತಿ ಅಥವಾ ಮಹಿಳೆ ದೇಶದ ರಾಷ್ಟ್ರಪತಿ ಆಗಿ ಆಯ್ಕೆಯಾದದ್ದಿಲ್ಲ. ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿಯಲ್ಲಿ ಇದೇ ವರ್ಷ ಜುಲೈ ೨೫ರಂದು ಕೊನೆಗೊಳ್ಳಲಿದೆ. ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಕೇಳಿ ಬರುತ್ತಿರುವ ಹೆಸರುಗಳೆಂದರೆ ಎಲ್. ಕೆ. ಆಡ್ವಾಣಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು.

Related posts

Leave a Reply