Header Ads
Breaking News

ಕೈಗಾರಿಕೆಗಳಿಗೆ ಬಂಡವಾಳ ಹಾಕಲು ಜನ ಹಿಂದೇಟು : ಶಾಸಕ ಯು.ಟಿ. ಖಾದರ್ ಹೇಳಿಕೆ

ಕೈಗಾರಿಕೋದ್ಯಮಿಗಳಿಂದ ಇರಾ ಕೈಗಾರಿಕಾ ಪ್ರದೇಶದಲ್ಲಿನ ಜಾಗಕ್ಕೆ ಬೇಡಿಕೆ ಸಲ್ಲಿಸಿದ್ದರೂ ಪ್ರಸ್ತುತ ದಿನಗಳಲ್ಲಿ ಇರುವ ಕೈಗಾರಿಕೆಗಳೇ ಬಂದ್ ಆಗಿರುವುದರಿಂದ ಬಂಡವಾಳ ಹಾಕಲು ಜನ ಹಿಂದೇಟು ಹಾಕುತ್ತಿದ್ದಾರೆ, ಇದರಿಂದಾಗಿ ಇರಾ ಕೈಗಾರಿಕಾ ಪ್ರದೇಶಕ್ಕೂ ಅಡ್ಡಿಯಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮುಡಿಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲೇ ಜಿಡಿಪಿ ತೀವ್ರ ಕುಸಿತ ಕಂಡಿರುವುದರಿಂದ ಇರಾದಲ್ಲಿ ಕೈಗಾರಿಕೆಗಳು ಆರಂಭಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಹಿಂದೆ ಈ ಪ್ರದೇಶಕ್ಕೆ ಹತ್ತು ಫಾರ್ಮಸಿ ಕಂಪನಿಗಳ ಮುಖ್ಯಸ್ಥರು ಆಗಮಿಸಿದಾಗ ರಸ್ತೆ ಸರಿಯಲ್ಲ ಎನ್ನುವ ಕಾರಣಕ್ಕೆ ಹಿಂದೇಟು ಹಾಕಿದ್ದರು. ಬಳಿಕ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಯುವಕರು ದ್ವಿಚಕ್ರ ವಾಹನ ಬಳಸಿ ಮೋಜು, ಮಸ್ತಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಗೇಟ್ ಹಾಕಿ ಮುಚ್ಚುವ ಹಾಗೂ ಪಹರೇದಾರರನ್ನು ನೇಮಿಸಲು ಯೋಚಿಸಲಾಗಿದೆ. ಮುಡಿಪುವಿನಲ್ಲಿರುವ ಐಬಿ ತಾಲೂಕು ಮಟ್ಟದ್ದಾಗಿ ರೂಪಿಸಿ ಪ್ರವಾಸಿ ತಾಣವನ್ನಾಗಿ ಯೋಚಿಸಲಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಮತಾ ಗಟ್ಟಿ, ಚಂದ್ರಹಾಸ ಕರ್ಕೇರ, ಪ್ರಶಾಂತ್ ಕಾಜವ, ಅಬ್ದುಲ್ ಜಲೀಲ್ ಮೋಂಟುಗೋಳಿ, ನಾಸಿರ್ ನಡುಪದವು, ವೈದ್ಯೆ ಹನ್ನತ್ ಆಯಿಶಾ ರೀಮಾ, ಜಿ.ಕಸ್ತೂರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *