Header Ads
Breaking News

ಜಿಲ್ಲಾಧಿಕಾರಿಯವರಿಗೆ ಬೆದರಿಕೆ ಬಂದರೂ ತನಿಖೆ ಮಾಡಿಲ್ಲ : ಯು.ಟಿ. ಖಾದರ್

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಯು.ಟಿ. ಖಾದರ್ ಇಂದು ಮತ್ತೆ ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿಗೆ ಬೆದರಿಕೆ ಬಂದರೂ ಅದರ ಬಗ್ಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರಿಗೆ ಖಂಡನೆ ಮಾಡುವ ಸೌಜನ್ಯವೂ ಇಲ್ಲ. ಪೊಲೀಸರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರ ಬಗ್ಗೆ ನಮಗೆ ಹೆಮ್ಮೆ ಇದೆ. ಪೊಲೀಸರು ಪ್ರಮಾಣಿಕ ಕೆಲಸ ಮಾಡಿದ್ದಾರೆ. ನಮ್ಮ ಜಿಲ್ಲೆಯ ಸಚಿವರು ಸಂಸದರು ಏನು ಮಾಡಿದ್ದಾರೆ ಎಂದು ಖಾದರ್ ಪ್ರಶ್ನಿಸಿದ್ದಾರೆ. ಅಧಿಕಾರಿಗಳಿಗೆ ಧೈರ್ಯ ತುಂಬುವ ಕೆಲಸವೂ ಮಾಡಿಲ್ಲ. ನಮ್ಮ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆಯೂ ಆಗಿಲ್ಲ. ಯಾರೂ ಕೂಡ ರಾಜೀನಾಮೆ ಕೂಡ ಕೊಟ್ಟಿಲ್ಲ ಆದರೆ ಬಿಜೆಪಿಯ ಅವಧಿಯಲ್ಲಿ ಇದೆಲ್ಲ ನಡೆದಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *