Header Ads
Header Ads
Header Ads
Breaking News

ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಬಂಟ್ವಾಳದ ಎಸ್‌ವಿಎಸ್ ದೇವಳ ಮೈದಾನದಲ್ಲಿ ಆಯೋಜನೆ ಕೆಸರು ಗದ್ದೆಯಂತಾದ ಮೈದಾನ

ಮಳೆಯಲ್ಲೇ ಸ್ಪರ್ಧಿಸುತ್ತಿರುವ ವಿದ್ಯಾರ್ಥಿಗಳುಅವ್ಯವಸ್ಥಿತ ಮೈದಾನದಲ್ಲಿ ಮುಂದುವರಿದ ಕ್ರೀಡಾಕೂಟಕ್ರೀಡಾಕೂಟಕ್ಕೆ ಯೋಗ್ಯವಲ್ಲದ ಮೈದಾನದಲ್ಲಿಸ್ಪರ್ಧೆಆಯೋಜಕರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಬಂಟ್ವಾಳದ ಎಸ್‌ವಿಎಸ್ ದೇವಳ ಮೈದಾನದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನಡೆಯುತ್ತಿದೆ. ಅವ್ಯವಸ್ಥಿತವಾದ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಮಳೆ ಬಂದು ಸಂಪೂರ್ಣ ಕೆಸರು ಗದ್ದೆಯಂತಾದ ಮೈದಾನದಲ್ಲಿ ಕ್ರೀಡಾಕೂಟ ಮುಂದುವರಿದಿದೆ.

ಮಳೆಯಲ್ಲಿ ನೆನೆಯುತ್ತಲೇ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಭಾಗವಹಿಸಿದ್ದಾರೆ. ಕ್ರೀಡಾಕೂಟಕ್ಕೆ ಯೋಗ್ಯವಲ್ಲದ ಮೈದಾನದಲ್ಲಿ ಸ್ಪರ್ಧೆ ಆಯೋಜಿಸಿರುವ ಬಗ್ಗೆ ವಿದ್ಯಾರ್ಥಿ ಪೋಷಕರು ಹಾಗೂ ಕ್ರೀಡಾಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಳೆಯಲ್ಲಿಯೇ ಕ್ರೀಡಾಕೂಟ ಮುಂದುವರಿಸಿ ಹೆಸರಿಗೆ ಮಾತ್ರ ಕ್ರೀಡಾಕೂಟ ಆಯೋಜಿಸಿದಂತೆ ದಾಖಲೆ ತೋರಿಸುವುದಕ್ಕಿಂತ ಇಂತ ಕ್ರೀಡಾಕೂಟಗಳನ್ನು ಆಯೋಜಿಸದಿರುವುದೇ ಯೋಗ್ಯ ಎಂಬ ಟೀಕೆ ಶಿಕ್ಷಣ ಇಲಾಖೆ ವಿರುದ್ದ ಕೇಳಿ ಬರುತ್ತಿದೆ.ಮಂಗಳೂರು ನಗರದಲ್ಲಿ ವೈಜ್ಞಾನಿಕ ಸುವ್ಯವಸ್ಥಿತ ಕ್ರೀಡಾಂಗಣ ಇದ್ದರೂ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸೌಲಭ್ಯಗಳೇ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉತ್ತರಿಸಬೇಕಾಗಿದೆ.

Related posts

Leave a Reply