Header Ads
Header Ads
Breaking News

ಜಿಲ್ಲಾ ಮಟ್ಟದ ಶಾರದಾ ಮಹೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ಶಾರದಾ ವಿದ್ಯಾಲಯದಲ್ಲಿ ಆಯೋಜನೆ. ಮಕ್ಕಳಿಂದ ವಿವಿಧ ಪ್ರತಿಭೆಗಳ ಅನಾವರಣ.

ಮಂಗಳೂರು ಕೊಡಿಯಾಲಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ’ಶಾರದಾ ಮಹೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯಿತು.ನಾವು ಅಚರಿಸುವ ಧಾರ್ಮಿಕ, ರಾಷ್ಟ್ರೀಯ ಹಬ್ಬಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಹಾಗೂ ದೇಶದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿ ಅವರನ್ನು ಸುಸಂಸ್ಕೃತರನ್ನಾಗಿಸುತ್ತದೆ.

ಈ ಉದ್ದೇಶದಿಂದ ನಮ್ಮಲ್ಲಿ ಪ್ರತೀ ವರ್ಷವೂ ಶಾರದಾ ಮಹೋತ್ಸವವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಆಚರಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಚಿತ್ರಕಲೆ, ರಂಗೋಲಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ ಗೀತಾ ಕಂಠಪಾಠ, ಶಂಖನಾದ, ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.ಈ ಸಂದರ್ಭ ಶಾರದಾ ವಿದ್ಯಾಲಯದ ಶಿಕ್ಷಕಿ ಶೃತಿ ಎಸ್ ಭಟ್ ಅವರು ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಅನಾರವಣಗೊಳಿಸಲು ಇದೊಂದು ವೇದಿಕೆ ಎಂದು ಹೇಳಿದರು.ಈ ಸಂದರ್ಭ ಶಾಲಾ ಪ್ರಾಂಶುಪಾಲರು ಸಹಿತ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

Leave a Reply