Header Ads
Header Ads
Breaking News

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವಲ್ಲಿ ತಾರತಮ್ಯ:ಉಮಾನಾಥ ಕೋಟ್ಯಾನ್ ಆರೋಪ

‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಉಸ್ತುವಾರಿ ಸಚಿವರಲ್ಲಿ, ಜಿಲ್ಲಾಧಿಕಾರಿಗಳ ಸಹಿತ, ಕಸಾಪದ ಜಿಲ್ಲಾಧ್ಯಕ್ಷರಲ್ಲಿ ತನ್ನ ಪಟ್ಟಿಯನ್ನು ನಾನು ನೀಡಿದ್ದೇ ಕನಿಷ್ಠ ಒಂದಾದರೂ ಹೆಸರನ್ನು ಲೆಕ್ಕಿಸದೇ ತಮಗೆ ಇಚ್ಚಿಸಿದಂತೆ ಹಂಚಿಕೆಯಾಗಿರುವುದು ಪ್ರಶಸ್ತಿಗೆ ಅನ್ಯಾಯ ಮಾಡಿದಂತೆ ಆಗಿದೆ ಇದನ್ನು ಒಂದು ಪಕ್ಷದ ಅಡಿಯಾಳಾಗಿರಲು ಪ್ರೇರಣೆ ನೀಡಿದಂತಾಗಿದೆ’ ಎಂದು ಕೋಟ್ಯಾನ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮೂಲ್ಕಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಯಾದ ತಾನು ಶಾಸಕನ ನೆಲೆಯಲ್ಲಿ 9 ಮಂದಿಯ ಹೆಸರನ್ನು ಮೂಲ್ಕಿ ಮೂಡಬಿದಿರೆ ಕ್ಷೇತ್ರದಿಂದ ಶಿಫಾರಸ್ಸು ಮಾಡಿದ್ದೇನೆ ಆದರೆ, ನನ್ನ ಮನವಿಯನ್ನು ಪುರಸ್ಕರಿಸದೇ, ಯಾರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೋ ಹಾಗೂ ಪಕ್ಷದ ಕಾರ್ಯಕರ್ತರಾಗಿದ್ದವರಿಗೆ ಪ್ರಶಸ್ತಿಯನ್ನು ಹಂಚಲಾಗಿದೆ ಅದಕ್ಕೆ ಸೂಕ್ತವಾದ ಮಾನದಂಡವನ್ನು ಅಳವಡಿಸಿಲ್ಲ ಮಾತ್ರವಲ್ಲದೇ ಶಾಸಕರ ಶಿಫಾರಸ್ಸನ್ನು ಮೂಲೆ ಗುಂಪು ಮಾಡಲಾಗಿದೆ. ಈ ಮೂಲಕ ಯಾರು ಅರ್ಹರೋ ಅವರು ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಈ ರೀತಿಯಾಗಿ ತಾನು ಕಳಿಸಿದ ಪಟ್ಟಿಯಲ್ಲಿದ್ದ ಒಬ್ಬರನ್ನೂ ಸಹ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಿಲ್ಲ ಎಂದರಲ್ಲದೆ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಯು.ಟಿ.ಖಾದರ್ ಅವರು ತಮ್ಮ ಮರ್ಜಿಗೆ ಅನುಗುಣವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ಬೆಂಬಲಿಗರಿಗೆ ಪ್ರಶಸ್ತಿ ಹಂಚಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಶಾಸಕ ಕೋಟ್ಯಾನ್ ಅವರು ಮಾಡಿದ್ದಾರೆ

 

Related posts

Leave a Reply