Header Ads
Header Ads
Breaking News

ಜಿಲ್ಲಾ ಸರಕಾರಿ ಆಸ್ಪತ್ರೆಗಿಲ್ಲ ಮಾನಸಿಕ ಚಿಕಿತ್ಸೆ ಈಗ ಇರುವ ಮಾನಸಿಕ ವಾರ್ಡ್ ಕೆಡವಿ ಡಯಾಲಿಸಿಸ್ ಘಟಕ ವೈದ್ಯರ ಕೊರತೆ ಮರೆಮಾಚಲು ವಾರ್ಡ್ ಕೆಡವಿದ್ರಾ? ಅಧಿಕಾರಿಗಳ ವಿರುದ್ದ ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ಇದು ಬುದ್ದಿವಂತರ ಜಿಲ್ಲೆಯ ಏಕೈಕ ಜಿಲ್ಲಾ ಸರಕಾರಿ ಆಸ್ಪತ್ರೆ… ಈ ಆಸ್ಪತ್ರೆ ಮೇಲ್ದರ್ಜಗೆ ಏರಲು ಹಾವು ಏಣಿ ಆಟ ನಡೆಯುತ್ತಿದೆ. ಒಂದು ಸೌಲಭ್ಯ ಇದ್ರೆ ಇನ್ನೊಂದಿರೋದಿಲ್ಲ …ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ವಾರ್ಡನ್ನು ಕೆಡವಿ ಶಾಶ್ವತ ಮಾನಸಿಕ ವಾರ್ಡ್ ಮುಚ್ಚಿಸಲು ಹುನ್ನಾರ ನಡೆಯುತ್ತಿದೆ. ಇದು ಸಮಾಜಿಕ ಕಾರ್ಯಕರ್ತರ ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರಿ ಆಸ್ಪತ್ರೆಯಲ್ಲಿ ಸಮಸ್ಯೆಗಳು ಸಾವಿರಾರು.. ವೈದ್ಯರಿದ್ದರೆ ಸೌಲಭ್ಯ ಇರಲ್ಲ…ಸೌಲಭ್ಯ ಇದ್ದರೆ ವೈದ್ಯರೇ ಇರಲ್ಲ.. ಇಂತಹ ಸಮಸ್ಯೆ ಇರುವ ಸಂದರ್ಬದಲ್ಲಿ ಅಗತ್ಯವಾಗಿ ಬೇಕಾಗಿರುವ ಮಾನಸಿಕ ವಾರ್ಡನ್ನು ಕೆಡವಿ ಡಯಾಲಿಸಿಸ್ ಘಟಕ ಸ್ಥಾಪನೆ ಮಾಡಾ‌ಅಗುತ್ತಿದೆ. ಇದು ನಡೆದಿರೋದು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿಯಲ್ಲಿ.. ಉಡುಪಿಯ ಜಿಲ್ಲಾ ಆಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲಾ ಸರಕಾರಿ ಆಸ್ಪತ್ರೆ ಇನ್ನೂ ಮೇಲ್ದರ್ಜೆಗೆ ಏರಲಿಲ್ಲ. ಇಂತಹದುರ ನಡುವೆ ಮಾನಸಿಕ ಚಿಕಿತ್ಸೆಗೆ ಇರುವ ವಾರ್ಡನ್ನೇ ಕೆಡವಲಾಗಿದೆ. ಇದರಿಂದ ಮಾನಸಿಕ ರೋಗಿಗಳು ಅತಂತ್ರದಲ್ಲಿದ್ದು ಬೇರೆ ಆಸ್ಪತ್ರೆಗೆ ಸಾಗಿಸುವ ಅನಿವಾರ್ಯತೆ ಎದುರಾಗಿದೆ.

ಅಂದ ಹಾಗೆ ಮಾನಸಿಕ ವಾರ್ಡ್ ಕೆಡವಿ ಅಲ್ಲಿ ಡಯಾಲಿಸಿಸ್ ಘಟಕ ಸ್ಥಾಪನೆ ಮಾಡಲಾಗುತ್ತಿದೆ . ಈಗಾಗಲೇ ಡಯಾಲಿಸಿಸ್ ಗೆ ಬೇಡಿಕೆ ಜಾಸ್ತಿ ಇದ್ದು ಡಯಾಲಿಸಿಸ್ ಯಂತ್ರ ಹೆಚ್ಚುವರಿಯಾಗಿ ಬಂದ ಹಿನ್ನಲೆಯಲ್ಲಿ ಮಾನಸಿಕ ವಾರ್ಡ್ ಸ್ಥಳಾಂತರ ಮಾತ್ರ ಎಂದು ಜಿಲ್ಲಾ ಸರ್ಜನ್ ಸಬೂಬು ನೀಡಿದ್ದಾರೆ. ಈಗಿರುವ ಡಯಾಲಿಸಿಸ್ ಕೇಂದ್ರದಲ್ಲಿ ಮಾನಸಿಕ ವಾರ್ಡ್ ಸ್ಥಳಾಂತರ ಮಾಡುವುದು ಅಸಾದ್ಯ. ಏಕೆಂದರೆ ಮಾನಸಿಕ ವಾರ್ಡ್ ಸ್ಥಾಪನೆ ಮಾಡಲು ಅದರದ್ದೇ ಮಾನದಂಡವಿದೆ. ಜನರಲ್ ವಾರ್ಡ್ ಹಾಗೂ ಎಮರ್ಜೆನ್ಸಿ ವಾರ್ಡ್ ಮಧ್ಯೆ ಮಾನಸಿಕ ವಾರ್ಡ್ ಮಾಡಿದರೆ ರೋಗಿಗಳಿಗೇ ತೊಂದರೆ ಆದ್ದರಿಂದ ಮಾನಸಿಕ ವಾರ್ಡನ್ನು ಶಾಸ್ವತವಾಗಿ ಮುಚ್ಚಿಸುವ ಹುನ್ನಾರ ನಡೆಯುತ್ತಿದೆ. ಈ ಹಿಂದೆಯೂ ಕೂಡಾ ಮಾನಸಿಕ ವಾರ್ಡ್ ಮುಚ್ಚುವ ಹುನ್ನಾರ ನಡೆದಿತ್ತು. ಆಗ ಸಾಮಾಜಿಕ ಕಾರ್ಯಕರ್ತರು ಇದನ್ನು ಪ್ರತಿಭಟಿಸಿ ಮತ್ತೆ ಪುನರ್ ಆರಂಭಿಸಿದ್ದರು. ಆದ್ರೆ ಮತ್ತೆ ಇದೀಗ ಮಾನಸಿಕ ವಾರ್ಡ್ ಮುಚ್ಚುವ ಭೀತಿ ಎದುರಾಗಿದ್ದು ಮಾನಸಿಕ ಚಿಕಿತ್ಸೆ ಇನ್ಮುಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಮರೀಚಿಕೆ ಯಾಗಲಿದೆ.

ಉಡುಪಿಯ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಆದ್ರೆ ಮಾನಸಿಕ ಚಿಕಿತ್ಸೆಗೆ ಉತ್ತಮ ವೈದ್ಯರೇ ಇದ್ದರು. ಇಂತಹ ಸಂದರ್ಬದಲ್ಲಿ ಮಾನಸಿಕ ವಾರ್ಡನ್ನೇ ಮುಚ್ಚುವ ಹುನ್ನಾರ ಆಕ್ರೋಶಕ್ಕೆ ಕಾರನವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕೆಂಬುದು ಎಲ್ಲರ ಆಗ್ರಹವಾಗಿದೆ.