Header Ads
Breaking News

ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್, ಪ್ರತ್ಯೇಕ ಐಸೋಲೇಟ್ ವಾರ್ಡ್ ನಿರ್ಮಾಣ ಮಾಡಬೇಕು; ಯು.ಟಿ ಖಾದರ್

ಉಳ್ಳಾಲ: ಕೊರೋನ ವೈರಸ್‍ನಂತಹ ಮಾರಕ ರೋಗದಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಿಬಂದಿಗಳು ಮತ್ತು ಜನಪ್ರತಿನಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು. ಪ್ರತೀ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಪರೀಕ್ಷಾ ಕಿಟ್ ಮತ್ತು ವೈದ್ಯರಿಗೆ ದಾದಿಯರಿಗೆ ಸೇಫ್ಟಿ ಗೌನ್, ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಮತ್ತು ಪ್ರತ್ಯೇಕ ಐಸೋಲೇಟ್ ವಾರ್ಡ್ ನಿರ್ಮಾಣ ಮಾಡಬೇಕು ಎಂದು ಶಾಸಕ ಯು.ಟಿ.ಖಾದರ್ ಸರಕಾರವನ್ನು ಆಗ್ರಹಿಸಿದ್ದಾರೆ.

ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ವೈರಸ್ ಬಗ್ಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥರು, ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ಮತ್ತು ಸ್ಥಳಿಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕೊರೊನಾ ವೈರಸ್‍ನಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸಲು ಪ್ರತೀ ಆರೋಗ್ಯ ಕೇಂದ್ರಗಳು ಸನ್ನದ್ಧವಾಗಿರಬೇಕು ಮುಖ್ಯವಾಗಿ ತಪಾಸಣೆಗೆ ಬರುವ ರೋಗಿಗಳನ್ನು ಪರೀಕ್ಷಿಸಲು ಕೊರೊನಾ ವೈರಸ್ ಪರೀಕ್ಷೆಯ ಕಿಟ್ ಪ್ರತೀ ಆರೋಗ್ಯ ಕೇಂದ್ರದಲ್ಲಿ ಇರಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದು ಎರಡು ದಿನಗಳಲಲಿ ಎಲ್ಲಾ ಆರಗ್ಯ ಕೇಂದ್ರಗಳಲ್ಲಿ ಪರೀಕ್ಷಾ ಕಿಟ್ ಲಭ್ಯವಾಗಲಿದೆ.

ಜಿಲ್ಲಾ ಸರಕಾರಿ ಆಸ್ಪತ್ರೆ ಅಥವಾ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್‍ನ ಪರೀಕ್ಷಾ ಲ್ಯಾಬ್ ನಿರ್ಮಿಸಬೇಕು. ಇದರೊಂದಿಗೆ ವಾಮಂಜೂರು ಪ್ರದೇಶದ ಟಿ.ಬಿ. ಆಸ್ಪತ್ರೆಯಂತಹ ಪ್ರದೇಶಗಳಲ್ಲಿ ಪ್ರತ್ಯೇಕ ಐಸೋಲೇಟ್ ವಾರ್ಡ್ ಸ್ಥಾಪನೆ ಮಾಡಬೇಕು ಇಂತಹ ಕಾರ್ಯಕ್ಕೆ ಕಾರ್ಪೋರೇಟ್  ಸಂಸ್ಥೆಗಳು ಆರ್ಥಿಕ ಸಹಾಯ ನೀಡಲು ಮುಂದೆ ಬರುತ್ತದೆ ಎಂದ ಅವರು ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದ್ದು, ಆಯುಷ್ಮಾನ್ ಯೋಜನೆ ಕೊರೊನಾ ವೈರಸ್‍ನಿಂದ ಸೋಂಕಿತರಾದವರಿಗೂ ಚಿಕಿತ್ಸೆಯ ವೆಚ್ಚ ಬರಿಸುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಜೇಶ್ ,ತಾಲೂಕು ಆರೋಗ್ಯ ಅಧಿಕಾರಿ ಡಾ| ಸುಜಯ್ ಭಂಡಾರಿ, ಉಳ್ಳಾಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಶಾಂತ್ ಅಮೀನ್, ಕೋಟೆಕಾರು ಆರ್ಯೋ ಕೇಂದ್ರದ ಡಾ| ಗೋಪಿ ಪ್ರಕಾಶ್, ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ| ಸುದೇಶ್, ಬೋಳಿಯಾರ್ ಆರೋಗ್ಯ ಕೇಂದ್ರದ ಡಾ| ಸುನಿತಾ, ಯೆನೆಪೊಯ ವೈದ್ಯಕೀಯ ಕಾಲೇಜಿನ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಸಮದ್, ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೈಕ್ರೋ ಬಯೋಲಾಜಿಸ್ಟ್ ಡಾ| ಅಂಕಿತ್, ನಿರ್ಮಲ ನರ್ಸಿಂಗ್ ಹೋಮ್‍ನ ಪ್ರಸೂತಿ ವಿಭಾಗದ ಮುಖ್ಯಸ್ಥರು, ನೇತಾಜಿ ಆಸ್ಪತ್ರೆಯ ಡಾ| ಸುಜಯ ಪ್ರಭಾಕರ್, ಆರೋಗ್ಯ ಸಮಿತಿ ಅಧ್ಯಕ್ಷ ಹುಸೈನ್ ಕುಂಞ ಮೋನು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *