Header Ads
Breaking News

ಜಿಲ್ಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಲು ಎತ್ತಿನಹೊಳೆ ಯೋಜನೆ ಕಾರಣ: ಎನ್‌ಇಸಿಎಫ್ ಸದಸ್ಯ ಶಶಿಧರ್ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬರಗಾಲ ಸೃಷ್ಟಿಯಾಗಲು ಎತ್ತಿನಹೊಳೆ ಪ್ರೋಜೆಕ್ಟ್ ಕಾರಣ ಅಂತಾ ಎನ್‌ಇಸಿಎಫ್ ಸದಸ್ಯ ಶಶಿಧರ್ ಶೆಟ್ಟಿ ಆರೋಪಿಸಿದ್ದಾರೆ.ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ದಕ್ಷಿಣಕನ್ನಡ ಜಿಲ್ಲೆಯ ೭ ಶಾಸಕರು, ಸಚಿವರು ಈ ಯೋಜನೆಯನ್ನು ತಡೆಯುವ ಕೆಲಸ ಮಾಡಬೇಕು. ಮಾತ್ರವಲ್ಲದೇ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕೆಂದು ಆಗ್ರಹಿಸಿದ್ರು. ಈ ಯೋಜನೆಯನ್ನು ತಡೆಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ರು. ಇದೇ ವೇಳೆ ಮಾತನಾಡಿದ ಸಹ್ಯಾದ್ರಿ ಸಂಚಯ ದಿನೇಶ್ ಹೊಳ್ಳ , ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಪಶ್ಚಿಮಘಟ್ಟದ ಕಾಡ್ಗಿಚ್ಚುವಿಗೆ ಯಾವುದೇ ಶಾಶ್ವತ ಪರಿಹಾರವನ್ನು ಈವರೆಗೆ ಸರ್ಕಾರ ಮಾಡಿಲ್ಲ ಜಿಲ್ಲೆಯ ಬಹುತೇಕ ಕೃಷಿಭೂಮಿ, ಗದ್ದೆತೋಟಗಳು ಸೈಟುಗಳಾಗಿ ಪರಿವರ್ತನೆಯಾಗಿದ್ದು, ಇದ್ದ ಅಲ್ಪಸ್ವಲ್ಪ ಮರಗಿಡ , ಹಸಿರು ಹೊದಿಕೆಗಳನ್ನು ಉಳಿಸಲಾಗದೇ ಅಂತರ್ಜಲ ಕಡಿಮೆಯಾಗುತ್ತಾ ಬರುತ್ತಿವೆ ಎಂದು ಅವರು ಹೇಳಿದರು.

Related posts

Leave a Reply

Your email address will not be published. Required fields are marked *