Breaking News

ಜಿಲ್ಲೆಯಲ್ಲಿ ಶಾಂತಿ ಕದಡಲು ಕಲ್ಲಡ್ಕ ಭಟ್ ಹುನ್ನಾರ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಆರೋಪ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕದಡಲು ಆರ್.ಎಸ್.ಎಸ್.ನ ಕಲ್ಲಡ್ಕ ಭಟ್ ಹುನ್ನಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಲ್ಲಡ್ಕದಲ್ಲಿ ಅನ್ಯ ಕೋಮಿನ ಯುವಕನಿಗೆ ಚೂರಿ ಇರಿತದ ಪ್ರಕರಣವನ್ನು ಕಲ್ಲಡ್ಕ ಭಟ್ ತಿರುಚುವ ಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋಮು ಗಲಭೆ ನಡೆಸುವ ಯತ್ನ ಮಾಡುತ್ತಿದ್ದಾರೆ. ಇವರಿಂದ ಹಿಂದೂ ಯುವಕರು ದೂರವಾಗುತ್ತಿದ್ದಾರೆ. ಅವರನ್ನು ಒಲೈಕೆ ಮಾಡುವ ನಾಟಕ ಮಾಡುತ್ತಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ಬಂಧನವಾಗಬೇಕೆಂದು ಅವರು ಒತ್ತಾಯಿಸಿದರು.
ಮುಂದುವರಿದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಮುಸ್ಲಿಂ ಪರವಾಗಿದ್ದಾರೆ ಎಂದು ಕಲ್ಲಡ್ಕ ಭಟ್ ಹೇಳಿಕೆಗೆ ಜಿಲ್ಲಾ ಪಂಚಾಯತ್ ಸದಸ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರ ವಿರುದ್ಧ ಆರೋಪ ಮಾಡಲು ಭಟ್‌ರಿಗೆ ನೈತಿಕತೆ ಇಲ್ಲ. ಇದು ರಾಜಕೀಯ ಪ್ರೇರಿತ ಆರೋಪ ಅಂತಾ ಅವರು ಹೇಳಿದರು. ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಎಸ್. ಪಿ. ಭೂಷಣ್ ಬೊರಾಸೆ ವರ್ಗಾಯಿಸಿ ಎಂಬ ಭಟ್ ಹೇಳಿಕೆ ಸರಿಯಲ್ಲ, ಇಂತಹ ಹೇಳಿಕೆ ನೀಡಲು ಕಲ್ಲಡ್ಕ ಭಟ್‌ರಿಗೆ ನೈತಿಕತೆ ಇಲ್ಲ ಎಂದು ಅವರು ಹೇಳಿದರು.

Related posts

Leave a Reply