Header Ads
Header Ads
Breaking News

ಜಿಲ್ಲೆಯ ಜೇನು ಕುಟುಂಬಗಳಿಗೆ ಥಾಯಿ ಶ್ಯಾಕ್ ಬ್ರೂಡ್ ಕಾಯಿಲೆ

ಕಳೆದ ಎರಡು ವರ್ಷಗಳಿಂದ ಕೇರಳ ಮತ್ತು ತಮಿಳುನಾಡು ರಾಜ್ಯದ ರೈತರು ಸಾವಿರಾರಿ ಜೇನು ಪೆಟ್ಟಿಗೆಗಳನ್ನು ಸುಳ್ಯ ಪುತ್ತೂರು, ಬೆಳ್ತಂಗಡಿ ಭಾಗದ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಿಗುವ ಉತ್ಕೃಷ್ಟ ಮಟ್ಟದ ಜೇನು ಕುಟುಂಬಗಳಿಗೆ ಥಾಯಿ ಶ್ಯಾಕ್ ಬ್ರೂಡ್ ಕಾಯಿಲೆ ವ್ಯಾಪಿಸಿ ಜೇನು ಕುಟುಂಬಗಳು ನಾಶ ವಾಗುತ್ತಿದೆ. ಹೊರ ರಾಜ್ಯದಿಂದ ಅಲ್ಲಿನ ರೈತರು ತರುವ ಜೇನು ಪೆಟ್ಟಿಗೆಗಳನ್ನು ಇಲ್ಲಿನ ಪ್ರದೇಶಗಳಲ್ಲಿ ಇಡಲು ಇಲ್ಲಿನ ರೈತರು ಅವಕಾಶ ಮಾಡಿಕೊಡಬಾರದು ಎಂದು ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಕೃಷಿಕರಲ್ಲಿ ಮನವಿ ಮಾಡಿಕೊಂಡಿದೆ.

ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮಾತನಾಡಿ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಸಿಗುವ ಜೇನು ತುಪ್ಪ ಅತ್ಯಂತ ಉತ್ಕೃಷ್ಟವಾಗಿದ್ದು ಉತ್ತಮ ಬೇಡಿಕೆ ಇದೆ. ಹಲವು ವರ್ಷಗಳಿಂದ ಇಲ್ಲಿನ ರೈತರು ಜೇನು ಸಾಕಾಣಿಕೆಯನ್ನು ಉಪವೃತ್ತಿಯನ್ನಾಗಿಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ 2-3 ವರ್ಷಗಳಿಂದ ಕೇರಳ ಮತ್ತು ತಮಿಳುನಾಡಿನ ರಾಜ್ಯದ ರೈತರು ಸಾವಿರಾರು ಜೇನು ಕುಟುಂಬಗಳನ್ನು ಜಿಲ್ಲೆಯ ತಾಲೂಕಿನ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಅಲ್ಲಿನ ರೈತರು ಜೇನು ನೊಣಗಳಿಗೆ ಸಕ್ಕರೆ ಪಾಕವನ್ನು ಆಹಾರವಾಗಿ ನೀಡಿ ಜೇನು ತುಪ್ಪವನ್ನು 3-4 ದಿನಗಳಿಗೊಮ್ಮೆ ತೆಗೆಯುತ್ತಿದ್ದಾರೆ. ಹಾಗೆ ತೆಗೆದ ಜೇನು ತುಪ್ಪವನ್ನು ಸ್ಥಳೀಯರಿಗೆ ಕಡಿಮೆ ದರದಲ್ಲಿ ಕಳಪೆ ಗುಣಮಟ್ಟದ ತುಪ್ಪವನ್ನು ನೀಡುತ್ತಿದ್ದಾರೆ ಎಂದು ಹೇಳಿದ ಅವರು 1991ರಲ್ಲಿ ಇಲ್ಲಿನ ಜೇನು ನೊಣಗಳಿಗೆ ಥಾಯಿ ಶ್ಯಾಕ್ ಕಾಯಿಲೆ ಬಂದಿತ್ತು. ಈಗ ಮತ್ತೊಮ್ಮೆ ಜೇನು ಕುಟುಂಬಗಳಿಗೆ ಸುಳ್ಯದ ಹಲವು ಕಡೆ ರೋಗ ಭಾಧಿಸುತ್ತಿದೆ. ಹಲವು ಜೇನು ಕುಟುಂಬಗಳು ನಾಶವಾಗಿದೆ. ಈ ರೋಗವನ್ನು ಹತೋಟಿ ಮಾಡುತ್ತಿರುವ ಸಂದರ್ಭದಲ್ಲಿ ಹೊರರಾಜ್ಯದ ಕಡೆಯಿಂದ ಜೇನು ಕುಟುಂಬಗಳನ್ನು ತಂದಲ್ಲಿ ಮತ್ತೆ ಕಾಯಿಲೆ ವ್ಯಾಪಕವಾಗಿ ಹರಡುತ್ತದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಕೃತಿದತ್ತವಾದ ಗುಣಮಟ್ಟದ ಜೇನು ಹಗೂ ರೋಗ ರಹಿತ ಜೇನು ನೋಣಗಳನ್ನು ಕಾಪಾಡುವ ಉದ್ದೇಶದಿಂದ ಜಿಲ್ಲೆಯ ರೈತರು ಹೊರ ರಾಜ್ಯದಿಂದ ಬರುವ ಜೇನು ಪೆಟ್ಟಿಗೆಗಳನ್ನು ತಮ್ಮ ಜಮಿನುಗಳನ್ನು ಇಡಲು ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜಿ.ಪಿ.ಶ್ಯಾಮ್ ಭಟ್, ತಿಮ್ಮಯ್ಯ ಪಿಂಡಿಮನೆ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *