Breaking News

ಜಿಲ್ಲೆಯ ಶಾಲೆಗಳಲ್ಲಿ ಪ್ರವೇಶೋತ್ಸವದೊಂದಿಗೆ 2017-18 ಶೈಕ್ಷಣಿಕ ವರ್ಷ ಆರಂಭ

ಮಂಜೇಶ್ವರ:ವರ್ಣರಂಜಿತವಾದ ಬಣ್ಣಗಳಿಂದ ಕೂಡಿದ ವಸ್ತ್ರಗಳನ್ನು ಧರಿಸಿ ಪುಟಾಣಿಗಳ ಮೆರವಣಿಗೆಯೊಂದಿಗೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಗುರುವಾರದಂದು ವಿಜೃಂಭಣೆಯ ಪ್ರವೇಶೋತ್ಸವದೊಂದಿಗೆ 2017-18 ರ ಶೈಕ್ಷಣಿಕ ವರ್ಷ ಗುರುವಾರದಿಂದ ಆರಂಭಗೊಂಡಿತು.ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು. ಜಿಲ್ಲಾ ಮಟ್ಟದ ಪ್ರವೆಶೋತ್ಸವ ಕುಂಬಳೆ ಜಿ ಜೆ ಬಿ ಶಾಲೆ ಯಲ್ಲಿ ಜರಗಿತು. ಜಿಲ್ಲಾ ಪಂ. ಅಧ್ಯಕ್ಷ ಎ ಜಿ ಸಿ ಬಶೀರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಪ್ರವೇಶೋತ್ಸವ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲೇ ಸರಕಾರಿ ಶಾಲೆಗಳ ಪೈಕಿ ಅತೀ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಿದ ಶಾಲೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಪ್ರವೇಶೋತ್ಸವಕ್ಕಾಗಿ ಈ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಕುತ್ತಿಗೆಯನ್ನು ಕಡಿಯುತ್ತಿರುವ ಅಂಗೀಕಾರವಿಲ್ಲದ ಕೆಲವೊಂದು ಖಾಸಗಿ ಶಾಲೆಗಳ ವಿರುದ್ದ ಸರಕಾರ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇನ್ನು ಸರಕಾರಿ ಶಾಲೆಯಲ್ಲಿ ಹೆಚ್ಚಿನ ದಾಖಲಾತಿಯನ್ನು ನಿರೀಕ್ಷಿಸಬಹುದಾಗಿ ಅವರು ಹೇಳಿದರು. ಜಿಲ್ಲಾಧಿಕಾರ್ ಜೀವನ್ ಬಾಬು ಮುಖ್ಯ ಪ್ರಬಾಷಣೆಗೈದರು.ವೇದಿಕೆಯಲ್ಲಿ ಕೆ ಎಲ್ ಪುಂಡರೀಕ್ಷ, ಎ ಕೆ ಆರಿಫ್, ಅಬ್ದುಲ್ ಖಾದರ್ ಹಾಜಿ ಸೇರಿದಂತೆ ಹಲವರು ಉಪಸ್ಥರಿದ್ದರು. ಮುಖ್ಯ ಅತಿಥಿಗಳನ್ನು ಪುಟಾಣಿಗಳ ಮೆರವಣಿಗೆಯೊಂದಿಗೆ ಶಾಲೆಗೆ ಬರ ಮಾಡಿ ಕೊಳ್ಳಲಾಯಿತು.

Related posts

Leave a Reply