Header Ads
Breaking News

ಜಿ‌ಎಸ್‌ಟಿಯಿಂದ ಬೀಡಿ ಮೇಲೆ ಹೆಚ್ಚಿನ ಹೊರೆ, ಕರಾವಳಿ ಬೀಡಿ ಕಾರ್ಮಿಕರ ಮೇಲೆ ದುಷ್ಪರಿಣಾಮ

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸಾಂಪ್ರದಾಯಿಕ ಬೀಡಿ ಉದ್ಯಮಕ್ಕೆ ಸರಕು ಮತ್ತು ಸೇವಾ ತೆರಿಗೆ ಕಂಟಕವಾಗಿ ಪರಿಣಮಿಸಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ.
ಅವಸಾನದ ಅಂಚಿನಲ್ಲಿರುವ ಈ?ಉದ್ಯಮಕ್ಕೆ ಜಿ‌ಎಸ್ಟಿ ಶಾಶ್ವತ ಬೀಗ ಹಾಕಲಿದೆ ಎನ್ನುವ ಮಾತು ಕಾರ್ಮಿಕರಿಂದ ಕೇಳಿ ಬರುತ್ತಿದೆ. ಜುಲೈ ೧ರಿಂದ ಜಿ‌ಎಸ್ಟಿ ಜಾರಿಗೆ ಬರಲಿದ್ದು, ಬೀಡಿಗೆ ಶೇ. ೨೮ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. ತೆಂಡು ಎಲೆಗೆ ಶೇ. ೧೮ ಹಾಗೂ ತಂಬಾಕಿಗೆ ಶೇ. ೧೨ರಷ್ಟು ತೆರಿಗೆ ಬೀಳಲಿದೆ. ಹೀಗಾಗಿ ಜುಲೈ ೧ರ ಬಳಿಕ ಬೀಡಿ ದರದಲ್ಲಿ ರೂ. ೪ರಿಂದ ೫ರಷ್ಟು ಹೆಚ್ಚಳವಾಗಲಿದೆ.
ಒಂದು ಕೆ.ಜಿ. ತೆಂಡು ಎಲೆಯಿಂದ ೨,೦೦೦ ಬೀಡಿಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಬೀಡಿ ಕಟ್ಟಿದವರಿಗೆ ಒಂದು ಸಾವಿರಕ್ಕೆ ರೂ. ೧೭೦.೦೨ ಮಜೂರಿ, ರೂ. ೧೬.೪೩ ಬೋನಸ್ ಹಾಗೂ?ಶೇ. ೧೦ರಷ್ಟು ಭವಿಷ್ಯ ನಿಧಿಯನ್ನು ಕಂಪೆನಿಯ ಮಾಲೀಕರು ಪಾವತಿಸಬೇಕು. ಇದೆಲ್ಲವನ್ನು ಸರಿದೂಗಿಸಲು ಒಂದು ಕಟ