Breaking News

ಜಿ‌ಎಸ್‌ಟಿ ಜಾರಿಯಿಂದ ಅಗ್ಗವಾಗಲಿದೆ ಎಲ್ಲ,  ಕೇಂದ್ರ ಆದಾಯ ಕಾರ್ಯದರ್ಶಿ ಹಸ್ಮುಖ್

ಜಿ‌ಎಸ್ಟಿ ಜಾರಿಯಿಂದ ಕ್ರಮೇಣ ಎಲ್ಲ ಉತ್ಪನ್ನಗಳ ಮೇಲಿನ ತೆರಿಗೆ ದರ ಕಡಿಮೆ ಆಗುತ್ತದೆ ಎಂದು ಕೇಂದ್ರ ಸರ್ಕಾರದ ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಹೇಳಿದರು.
ಜಿ‌ಎಸ್ಟಿ ಕುರಿತ ಸಭೆಯಲ್ಲಿ ಮಾತನಾಡಿ, ಎಲ್ಲ ಬಗೆಯ ವ್ಯಾಪಾರಿಗಳು ಮತ್ತು ಉದ್ಯಮಿಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದರು. ವ್ಯಾಪಾರದಲ್ಲಿ ಸರಳ, ಏಕರೂಪತೆ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆ ಇರಬೇಕು. ಈಗಿರುವ ವ್ಯವಸ್ಥೆಯಲ್ಲಿ ಉತ್ಪನ್ನಗಳ ಮೇಲೆ ಬಹು ವಿಧದ ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಈ ಬಗ್ಗೆ ಗ್ರಾಹಕರಿಗೆ ಅರಿವು ಇರುವುದಿಲ್ಲ. ಇವೆಲ್ಲದಕ್ಕೂ ಪರಿಹಾರ ಜಿ‌ಎಸ್ಟಿ ವ್ಯವಸ್ಥೆ ಎಂದು ಹಸ್ಮುಕ್ ಹೇಳಿದರು.
ಎಲ್ಲ ರಾಜ್ಯಗಳಿಗೂ ಅನ್ವಯ ಆಗುವಂತೆ ಸರಕು ಮತ್ತು ಸೇವಾ ತೆರಿಗೆ ದರ ನಿಗದಿ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ವ್ಯಾಟ್ ಅತ್ಯಧಿಕವಿತ್ತು. ಇನ್ನು ಕೆಲವು ರಾಜ್ಯಗಳಲ್ಲಿ ಕಡಿಮೆ ಇತ್ತು. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ತೆರಿಗೆ ದರದ ಹಂತವನ್ನು ನಿಗದಿ ಮಾಡಲಾಗಿದೆ. ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿ ದರ ನಿಗದಿ ಮಾಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದರು.
ರೆಸ್ಟೋರೆಂಟ್ಗಳಿಗೆ ಕರ್ನಾಟಕದಲ್ಲಿ ಕಡಿಮೆ ವ್ಯಾಟ್ ದರ ನಿಗದಿ ಆಗಿತ್ತು. ಆದರೆ, ಬೇರೆ ರಾಜ್ಯಗಳಲ್ಲಿ ಅದು ಶೇ. ೧೪.೫ ಇತ್ತು. ಎಲ್ಲ ರಾಜ್ಯಗಳ ಸರಾಸರಿ ಗಣನೆಗೆ ತೆಗೆದುಕೊಂಡು ನಿಗದಿ ಮಾಡಲಾಗಿದೆ. ಶೇ. ೧೯ ರಷ್ಟು ಉತ್ಪನ್ನಗಳು ಶೇ. ೨೮ ತೆರಿಗೆ ದರದ ವ್ಯಾಪ್ತಿಯಲ್ಲಿವೆ. ಶೇ. ೪೨ ರಷ್ಟು ಉತ್ಪನ್ನಗಳು ಶೇ. ೧೮ ತೆರಿಗೆ ದರದಲ್ಲೂ ಉಳಿದವು ಶೇ. ೧೮ ಕ್ಕೂ ಕಡಿಮೆ ತೆರಿಗೆ ದರದ ವ್ಯಾಪ್ತಿಯಲ್ಲಿವೆ ಎಂದು ಹಸ್ಮುಕ್ ತಿಳಿಸಿದರು. ಫ್ಲ್ಯಾಟ್, ಮನೆ ದರ ಕಡಿಮೆ ಆಗಲಿದೆ ಕರ್ನಾಟಕದಲ್ಲಿ ಫ್ಲ್ಯಾಟ್ ಮತ್ತು ಮನೆ ನಿರ್ಮಾಣದ ದರ ಅಗ್ಗವಾಗಲಿದೆ ಎಂದು ಹಸ್ಮುಕ್ ತಿಳಿಸಿದರು.

Related posts

Leave a Reply