Breaking News

ಜಿ‌ಎಸ್‌ಟಿ ಜಾರಿ ಮೊಬೈಲ್‌ಗಳಿಗಿಲ್ಲ ರಿಯಾಯಿತಿ

ದೂರಸಂಪರ್ಕ ಸೇವೆಗಳ ಮೇಲಿನ ಜಿ‌ಎಸ್ಟಿ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕೆಂಬ ಬೇಡಿಕೆ ಈಡೇರದಿರುವುದಕ್ಕೆ ಮೊಬೈಲ್ ಸೇವಾ ಸಂಸ್ಥೆಗಳು ತಮ್ಮ ತೀವ್ರ ನಿರಾಶೆ ವ್ಯಕ್ತಪಡಿಸಿವೆ.
ಶೇ.?೧೮ರಷ್ಟು ತೆರಿಗೆ ಕಡಿಮೆ ಮಾಡಬೇಕು ಎಂದು ಭಾರತೀಯ ಮೊಬೈಲ್ ಸೇವಾ ಸಂಸ್ಥೆಗಳ ಸಂಘ ಸರ್ಕಾರವನ್ನು ಒತ್ತಾಯಿಸಿದ್ದವು. ಅವಶ್ಯಕ ಸೇವೆಗಳಿಗೆ ವಿಧಿಸಿರುವ ಶೇ. ೫ರಷ್ಟು ತೆರಿಗೆಯನ್ನು ಮೊಬೈಲ್ ಸೇವೆಗೂ ಅನ್ವಯಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದವು. ಹೊಸ ದರಗಳು ಜಾರಿಗೆ ಬರುತ್ತಿದ್ದಂತೆ ಗ್ರಾಹಕರ ಪಾಲಿಗೆ ದೂರಸಂಪರ್ಕ ಸೇವೆಗಳು ದುಬಾರಿಯಾಗಿ ಪರಿಣಮಿಸಲಿವೆ ಎಂದೂ ಅಹವಾಲು ಸಲ್ಲಿಸಿದ್ದವು.
ಸದ್ಯಕ್ಕೆ ಮೊಬೈಲ್ ಬಳಕೆದಾರರು ಮೊಬೈಲ್ ಬಿಲ್ಗಳ ಮೇಲೆ ಶೇ. ೧೫ರಷ್ಟು ಸೇವಾ ತೆರಿಗೆ ಮತ್ತು ಸೆಸ್ ಪಾವತಿಸುತ್ತಿದ್ದಾರೆ.
ಈಗ ನಿಗದಿ ಮಾಡಿರುವ ದರಗಳು ಬಹುತೇಕ ಅಂತಿಮ. ಯಾರೊ ಕೆಲವರು ಕೆಲ ವಿಷಯಗಳನ್ನು ಪ್ರಸ್ತಾಪಿಸಿದ ಕಾರಣಕ್ಕೆ ಅವುಗಳನ್ನೆಲ್ಲ ಈಡೇರಿಸಲಿಕ್ಕಾಗದು ಎಂದು ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

Related posts

Leave a Reply