Header Ads
Header Ads
Breaking News

ಜಿ‌ಎಸ್‌ಟಿ ತೆರಿಗೆ ಜಾಲ ನೋಂದಣಿ, ದೇಶದಲ್ಲೇ ಕರ್ನಾಟಕ ಮುಂದು

ಕರ್ನಾಟಕದ ಶೇ. ೯೪ರಷ್ಟು ವರ್ತಕರು ಜಿ‌ಎಸ್ಟಿ ಸರಕು ಮತ್ತು ಸೇವಾ ತೆರಿಗೆ ಜಾಲಕ್ಕೆ ನೋಂದಣಿಯಾಗಿದ್ದು, ಹೊಸ ತೆರಿಗೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ. ಬಿ. ವಿ. ಮುರಳೀಕೃಷ್ಣ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಜಿ‌ಎಸ್ಟಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮೌಲ್ಯವರ್ಧಿತ ತೆರಿಗೆ ವ್ಯಾಟ್ ವ್ಯವಸ್ಥೆಯ ಜಾರಿಯಲ್ಲೂ?ನಮ್ಮ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿತ್ತು. ನಮ್ಮ ವರ್ತಕರು ಹಲವು ತಾಂತ್ರಿಕ ಸಮಸ್ಯೆಗಳ ನಡುವೆಯೂ ವ್ಯವಹಾರವನ್ನು ಜಿ‌ಎಸ್ಟಿ ಜಾಲಕ್ಕೆ ಬದಲಾಯಿಸಿಕೊಂಡಿದ್ದಾರೆ.
ಜಿ‌ಎಸ್ಟಿ ಬಗ್ಗೆ ವರ್ತಕರು ಆತಂಕ ಪಡುವ ಅಗತ್ಯ ಇಲ್ಲ. ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ. ದೇಶ ಹೊಸ ಆರ್ಥಿಕ ವ್ಯವಸ್ಥೆಗೆ ತೆರೆದುಕೊಳ್ಳಲಿದೆ. ರೂ. ೨೦ ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ ಅಬಕಾರಿ, ಸೇವಾ ಮತ್ತು ವ್ಯಾಟ್ ಪಾವತಿದಾರರು ಜುಲೈ ೧ರಿಂದ ಜಿ‌ಎಸ್ಟಿ ಜಾಲದಲ್ಲಿ ಖರೀದಿ ಮತ್ತು ಮಾರಾಟ ಚಟುವಟಿಕೆ ಆರಂಭಿಸಲಿದ್ದಾರೆ ಎಂದು ಹೇಳಿದರು.

Related posts

Leave a Reply