Header Ads
Header Ads
Breaking News

ಜಿ ಎಸ್ ಟಿ ನ್ಯೂನತೆಗಳನ್ನು ಪರಿಹರಿಸುವಂತೆ ಒತ್ತಾಯ ಮಂಜೇಶ್ವರ ವ್ಯಾಪಾರಿಗಳ ಹರತಾಳ ಪೂರ್ಣ

ಜಿ.ಎಸ್.ಟಿ.ಯ ನ್ಯೂನತೆಗಳನ್ನು ಪರಿಹರಿಸಬೇಕು, ಸಣ್ಣ ವ್ಯಾಪಾರಿಗಳಿಗಾಗುವ ತೊಂದರೆಯನ್ನು ಬಗೆಹರಿಸಬೇಕು, ಜಿ.ಎಸ್.ಟಿ.ಗೆ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಬೇಕು, ಶಿಕ್ಷಾ ನಿಯಮಗಳನ್ನು ಸಡಿಲಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯೀ ವಿಕೋಪನಾ ಸಮಿತಿಯ ನೇತೃತ್ವದಲ್ಲಿ ರಾಜ್ಯದಲ್ಲಿ ವ್ಯಾಪಕವಾಗಿ ಮಂಗಳವಾರ ನಡೆದ ಬಂದ್ ಭಾಗವಾಗಿ ಮಂಜೇಶ್ವರ ಉಪ್ಪಳ, ಕುಂಬಳೆ ಕಾಸರಗೋಡುಗಳಲ್ಲಿ ವ್ಯಾಪಾರಿಗಳು ಅಂಗಡಿ ಮುಚ್ಚಿ ನಡೆಸಿದ ಬಂದ್‌ಗೆ ವ್ಯಾಪಕ ಬೆಂಬಲ ದೊರೆತಿದೆ.ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ಸ್ವಯಂ ಉದ್ಯೋಗವನ್ನು ಸೃಷ್ಟಿಸಿ ಅನೇಕರಿಗೆ ಉದ್ಯೋಗವನ್ನು ನೀಡುವ ವ್ಯಾಪಾರ ವಲಯಕ್ಕೆ ಬಂದ ಗಂಡಾಂತರವನ್ನು ಪರಿಹರಿಸಬೇಕಾಗಿದೆ ಎಂಬುದಾಗಿ ವ್ಯಾಪಾರಿ ನೇತಾರರು ಆಗ್ರಹಿಸಿದ್ದಾರೆ.

ರೆಹಮಾನ್ ಉದ್ಯಾವರ

Related posts

Leave a Reply