Header Ads
Header Ads
Breaking News

ಜಿ.ವಿ. ಪೈ ಮೆಮೋರಿಯಲ್ ಚಾರಿಟೆಬಲ್ ಆಸ್ಪತ್ರೆಯ ಉದ್ಘಾಟನೆ. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಉದ್ಯಮಿ ಎಲ್ ಗೋಯಲ್.

ಮೂಡಿಬಿದಿರೆಯ ಜಿ.ವಿ.ಪೈ ಮೆಮೋರಿಯಲ್ ಚಾರಿಟೆಬಲ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ನಡೆಯಿತು.ಸಮಾರಂಭದಲ್ಲಿ ಆರ್ಗನ್ ಡೊನೇಷನ್ ಇಂಡಿಯಾ ಫೌಂಡೇಶನ್‌ನ ಚೇರ್ಮನ್ ಹಾಗೂ ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾ ಮುಖ್ಯ ಪ್ರವರ್ತಕರಾದ ಎಲ್ ಗೋಯಲ್‌ರವರು ವಿಶೇಷ ಆಹ್ವಾನಿತರಾಗಿದ್ದರು. ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಧಿಕಾರಿ ಪದ್ಮ ವಿಭೂಷನ್ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ್ ಯುನಿವರ್ಸಿಟಿಯ ಪ್ರೊ. ವೈಸ್. ಚಾನ್ಸೆಲರ್ ಡಾ ಎಚ್. ಎಚ್. ಎಸ್. ಬಲ್ಲಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವಕೆ ಅಮರನಾಥ ಶೆಟ್ಟಿ, ಬಿಜೆಪಿ ಉಪಾಧ್ಯಕ್ಷ ಜಗದೀಶ್ ಆಧಿಕಾರಿ, ಅಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವಾ, ಆಳ್ವಾಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಹರೀಶ್ ನಾಯಕ್, ಬಾರ್ ಅಸೋಸಿಯೇಷನ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಕಾರ್ಪೊರೇಟರ್ ಪಿ.ಕೆ. ಥಾಮಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವ್ಯಾಲೇರಿಯನ್ ಸಿಕ್ವೇರಾ, ಡಾ. ವಿನಯ್ ಹೆಗ್ಡೆ, ಡಾ. ಮುರಳಿ ಕೃಷ್ಣ, ಅಬುಲಾಲ್, ಸಿ.ಎಚ್. ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply