Header Ads
Header Ads
Breaking News

ಜೀವಮಾನದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಆಗ ನಮ್ಮ ಜೀವನ ಸಾರ್ಥಕ ಪೊಂಪೈ ಕಾಲೇಜಿನ ರೆ.ಫಾ ವಿಕ್ಟರ್ ಡಿಮೆಲ್ಲೊ ಅಭಿಪ್ರಾಯ

 

ಜೀವಮಾನದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಆಗ ನಮ್ಮ ಜೀವನ ಸಾರ್ಥಕ ಎಂದು ಪೊಂಪೈ ಪದವಿ ಪೂರ್ವ ಕಾಲೇಜಿನ ಸಂಚಾಲಕ ರೆ.ಫಾ. ವಿಕ್ಟರ್ ಡಿಮೆಲ್ಲೋ ಹೇಳಿದರು.
ಅವರು ಪೊಂಪೈ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾರ್ಶೆಲ್ ಆರ್ಟ್ ಕಲಾವಿದ, ಮಂಗಳೂರಿನ ಏಕಲವ್ಯ ಕಾರ್ತಿಕ್ ಎಸ್ ಕಟೀಲ್ ಹಾಗೂ ಶ್ರೀಮತಿ ಶೋಭಾಲತಾ ಅವರಿಂದ ವಿದ್ಯಾರ್ಥಿಗಳಿಗೆ ಸ್ವರಕ್ಷಣಾ ತಂತ್ರಗಳ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ನಮ್ಮ ಅನಾರೋಗ್ಯ ಪೀಡಿತವಾದ ಸಮಾಜಕ್ಕೆ ಕಾರ್ತಿಕ್ ಎಸ್ ಕಟೀಲ್ ಮದ್ದು ಕೊಟ್ಟು ಒಂದು ಸಾಧನೆ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾರ್ತಿಕ್ ಎಸ್ ಕಟೀಲ್ ಅವರ ಹೆತ್ತವರಾದ ಸುರೇಶ್ ಕಟೀಲ್ ಮತ್ತು ಶೋಭಲತಾ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾನ್ಯಾಸಕ ಅನಂತ ಮುಡಿತ್ತಾಯ , ಪ್ರಾಶುಂಪಾಲ ಮ್ಯಾಥ್ಯೂ ಎನ್. ಎಂ, ಉಪಾನ್ಯಾಸಕಿ ಶ್ರುತಿ ಮತ್ತಿತರರು ಇದ್ದರು, ನಂತರ ಕಾರ್ತಿಕ್ ಅವರಿಂದ ತರಬೇತಿ ನಡೆಯಿತು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply