Header Ads
Header Ads
Breaking News

ಜುಗಾರಿ ಅಡ್ಡೆಗೆ ಪೊಲೀಸರಿಂದ ದಾಳಿ:36 ಮಂದಿಯ ಬಂಧನ

ಪುತ್ತೂರು: ಬೊಳುವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಆರ್.ಕೆ. ಸೆಂಟರ್ ಕಟ್ಟಡವೊಂದರ ೩ನೇ ಮಹಡಿಯಲ್ಲಿ ಸ್ಕಿಲ್ ಗೇಮ್ ಕ್ಲಬ್ ಹೆಸರಿನಲ್ಲಿ ಜುಗಾರಿ ಅಟ ಆಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 36 ಮಂದಿಯನ್ನು ಬಂಧಿಸಿದ್ದಾರೆ.ಬೊಳುವಾರಿನಲ್ಲಿ ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಜುಗಾರಿ ಅಡ್ಡೆಯ ಮೇಲ್ಛಾವಣಿಯಲ್ಲಿ ವಿಡಿಯೋ ಗೇಮ್ಸ್ ಇದ್ದು, ಕೆಳಗಿನ ಮಹಡಿಯಲ್ಲಿ ಹಣ ಇಟ್ಟು ಜುಗಾರಿ ಆಟ ಆಡುತ್ತಾರೆ ಎಂದು ಸಾರ್ವಜನಿಕರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಸಹಾಯಕ ಕಮೀಷನರ್ ಆದೇಶದ ಮೇರೆಗೆ, ಎಸ್ಪಿ ರವಿಕಾಂತೆ ಗೌಡ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರವಾಗಿ ಹಣವಿಟ್ಟು ಜುಗಾರಿ ಆಡುತ್ತಿದ್ದ ೩೬ ಮಂದಿಯನ್ನು ಬಂಧಿಸಿದ್ದು, ಅವರಿಂದ ರೂ. 98ಸಾವಿರ ನಗದು ವಶಕ್ಕೆ ಪಡೆದು ಕೊಂಡಿದ್ಧಾರೆ. ಘಟನೆಯ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಹೆಸರನ್ನು ಪಟ್ಟಿ ಮಾಡಲು ತಡವಾಗಿದ್ದ ಹಿನ್ನಲೆಯಲ್ಲಿ ಘಟನೆಯ ಕುರಿತು ಪೂರ್ಣ ಮಾಹಿತಿ ಲಭ್ಯವಾಗಿಲ್ಲ.

Related posts

Leave a Reply