Header Ads
Header Ads
Header Ads
Breaking News

ಜುಬೈರ್ ಕುಟುಂಬಕ್ಕೆ ೨೫ ಲಕ್ಷ ರೂ ಪರಿಹಾರಕ್ಕೆ ಒತ್ತಾಯ ಡಿವೈಎಫ್‌ಐ ನೇತೃತ್ವದಲ್ಲಿ ಅ.15 ರಂದು ಪ್ರತಿರೋಧ ಮೆರವಣಿಗೆ ಮುಕ್ಕಚ್ಚೇರಿಯಿಂದ ಉಳ್ಳಾಲ ಪುರಸಭೆ ಮೈದಾನದವರೆಗೆ ಜಾಥಾ

 

 ಜುಬೈರ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಉಳ್ಳಾಲ ಸಹಿತ ಜಿಲ್ಲೆಯಾದ್ಯಂತ ಗಾಂಜಾ ಸಹಿತ ಮಾದಕ ಪದಾರ್ಥ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಅ.15 ರಂದು ಮುಕ್ಕಚ್ಚೇರಿಯಿಂದ ಉಳ್ಳಾಲ ಪುರಸಭೆ ಮೈದಾನದವರೆಗೆ ಪ್ರತಿರೋಧ ಮೆರವಣಿಗೆ ನಡೆಯಲಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಈ ಬಗ್ಗೆತೊಕ್ಕೊಟ್ಟು ಸಿಪಿಎಂ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವ್ರು, ಗಾಂಜಾ ವಿರುದ್ಧ ದನಿ ಎತ್ತಿದ ಕಾರಣಕ್ಕಾಗಿ ಜುಬೈರ್ ಹತ್ಯೆಯಾಗಿದೆ. ಸರಕಾರದ ಬೇಜವಾಬ್ದಾರಿ ನೀತಿ ಹಾಗೂ ಪೊಲೀಸರ ನಿಷ್ಕ್ರಿಯತೆಯಿಂದ ಹತ್ಯೆ ನಡೆದಿದೆ. ಈ ನಿಟ್ಟಿನಲ್ಲಿ ಜುಬೈರ್ ಕುಟುಂಬಕ್ಕೆ ರಾಜ್ಯ ಸರಕಾರ ರೂ. 25 ಲಕ್ಷ ಪರಿಹಾರ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಸಿದರು. ಇದು ಅಲ್ಲದೇ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗಾಂಜಾ ಮಾಫಿಯಾಕ್ಕೆ ಕಡಿವಾಣ ಹಾಕಬೇಕೆಂದು ಅವ್ರು ಒತ್ತಾಯಿಸಿದರು.  ಸುದ್ಧಿಗೋಷ್ಠಿಯಲ್ಲಿ ಡಿ ವೈ ಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ರಫೀಕ್ ಹರೇಕಳ, ಸುನಿಲ್ ತೇವುಲ, ಮಹಮ್ಮದ್ ಸಾಲಿ, ಮೃತ ಜುಬೈರ್ ಸಹೋದರ ಆಸೀಫ್, ಪುತ್ರ ನಿಹಾಲ್ ಉಪಸ್ಥಿತರಿದ್ದರು

Related posts

Leave a Reply