Breaking News

ಜುಲಾಯಿ ಒಂದರಿಂದ ಮದ್ದಿಗೆ ಜಿ‌ಎಸ್‌ಟಿ ಗುದ್ದು, ದುಬಾರಿಯಾಗಲಿರುವ ಜೀವರಕ್ಷಕ ಔಷಧಿಗಳು

ಮುಂದಿನ ತಿಂಗಳಿನಿಂದ ಜಿ‌ಎಸ್ಟಿ ಬರುತ್ತಿದ್ದಂತೆ ಬಹುತೇಕ ಔಷಧಿಗಳ ಬೆಲೆಗಳು ಶೇ. ೨.೨೯ರಷ್ಟು ತುಟ್ಟಿಯಾಗಲಿವೆ.
ಅವಶ್ಯಕ ಔಷಧಿಗಳ ಮೇಲಿನ ಜಿ‌ಎಸ್ಟಿ ದರವನ್ನು ಶೇ. ೧೨ಕ್ಕೆ ನಿಗದಿಪಡಿಸಲಾಗಿದೆ. ಔಷಧಿಗಳ ಮೇಲಿನ ಸದ್ಯದ ತೆರಿಗೆ ಪ್ರಮಾಣ ಶೇ. ೯ರಷ್ಟಿದೆ. ಇನ್ಸುಲಿನ್ನಂತಹ ಕೆಲ ಔಷಧಿಗಳ ಬೆಲೆಗಳು ಮಾತ್ರ ಅಗ್ಗವಾಗಲಿವೆ. ಇನ್ಸುಲಿನ್ ಮೇಲಿನ ಜಿ‌ಎಸ್ಟಿ ದರವನ್ನು ಶೇ.?೧೨ ರಿಂದ ಶೇ. ೫ಕ್ಕೆ ಇಳಿಸಲಾಗಿದೆ.
ತೆರಿಗೆ ದರ ಇಳಿಸಿದ ಔಷಧಿಗಳ?ವಿಷಯದಲ್ಲಿ, ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು. ಜಿ‌ಎಸ್ಟಿಯಲ್ಲಿ ವಿಧಿಸಲಾಗಿರುವ ಲಾಭ ತಡೆ ನಿಬಂಧನೆಗೆ ಅನುಗುಣವಾಗಿ ಗ್ರಾಹಕರಿಗೆ ತೆರಿಗೆ ಕಡಿತದ ಪ್ರಯೋಜನ ವರ್ಗಾಯಿಸಲಾಗುವುದು ಎಂದು ಬೆಲೆ ಪ್ರಾಧಿಕಾರವು ತಿಳಿಸಿದೆ.

Related posts

Leave a Reply