Header Ads
Header Ads
Breaking News

ಜುಲೈ 14ರಂದು ವಿಟ್ಲ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ವಿಟ್ಲ: ವಿಟ್ಲ ರೋಟರಿ ಕ್ಲಬ್‍ನ 2019-20ನೇಸಾಲಿನ ನೂತನ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜು.14ರಂದು ಸಂಜೆ ಗಂಟೆ 7.30ಕ್ಕೆ ವಿಟ್ಲದ ವಿಟ್ಠಲ ಪಪೂ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ಜಯರಾಮ ರೈ ತಿಳಿಸಿದರು.

ಅವರು ವಿಟ್ಲ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2018-19ನೇ ಸಾಲಿನ ಗವರ್ನರ್ ರೋಹಿನಾಥ್ ಪಿ. ಅವರು ಪದಗ್ರಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಜೆ.ಶಂಕರ ಬಟ್, ಜೋನ್ 4ರ ಅಸಿಸ್ಟೆಂಟ್ ಗವರ್ನರ್ ರಿತೇಶ್ ಬಾಳಿಗಾ, ಜೋನಲ್ ಲೆಫ್ಟಿನೆಂಟ್ ಸಂಜೀವ ಪೂಜಾರಿ ಎಂ. ಭಾಗವಹಿಸಲಿದ್ದಾರೆ ಎಂದರು.

ಹಾಲಿ ಅಧ್ಯಕ್ಷ ಡಾ.ಚರಣ್ ಕಜೆ ಅವರು ಮಾತನಾಡಿ, ಕಳೆದ ವರ್ಷ 30 ಅಂಗನವಾಡಿಗಳಿಗೆ ಪ್ರತಿಯೊಬ್ಬ ಸದಸ್ಯರೂ ವಿಶೇಷ ಕೊಡುಗೆಯನ್ನು ನೀಡಿದ್ದು, ಅದು ಇತಿಹಾಸ ನಿರ್ಮಿಸಿದೆ. ಅಲ್ಲದೇ ಉಚಿತ ಡೆಂಟಲ್, ಕಣ್ಣು, ಡೆಂಚರ್, ಡಯಾಬಿಟಿಸ್ ಶಿಬಿರಗಳು ಸಮಾಜಕ್ಕೆ ಪ್ರಯೋಜನವಾಗಿವೆ. ಈ ಎಲ್ಲ ಸಾಧನೆಯನ್ನು ಗಮನಿಸಿ, ಪ್ರತಿಷ್ಠಿತ ಸೈಟೇಶನ್ ಅವಾರ್ಡ್ ಬಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ, ಕೋಶಾಧಿಕಾರಿ ಸಂಜೀವ ಪೂಜಾರಿ ಎಂ., ಪಿ.ಕೆ.ಶೆಟ್ಟಿ. ಹರೀಶ್ ಪೂಜಾರಿ, ದಿನೇಶ್ ವಿ. ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *