Header Ads
Breaking News

ಜುಲೈ 5ರಂದು ನಡೆಯಲಿದೆ ಬಂಟ್ವಾಳ ರೋಟರಿ ಕ್ಲಬ್‍ನ ಪದಗ್ರಹಣ ಸಮಾರಂಭ

ಬಂಟ್ವಾಳ: 51ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಂಟ್ವಾಳ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 5 ಶುಕ್ರವಾರ ಸಂಜೆ 7 ಗಂಟೆಗೆ ಬಿ.ಸಿ.ರೋಡಿನ ರೈಲು ನಿಲ್ದಾಣದ ಬಳಿಯ ರೋ. ಬಿ.ಎ.ಸೋಮಯಾಜಿ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷೆ ಶಿವಾಣಿ ಬಾಳಿಗ ತಿಳಿಸಿದರು.

ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ವಲಯ 3181ರ ಜಿಲ್ಲಾ ಗವರ್ನರ್ ರಂಗನಾಥ ಭಟ್ ಪದಗ್ರಹಣ ಅಧಿಕಾರಿಯಾಗಿ ಹಾಗೂ ಗಣೇಶ್ ಬೀಡಿ ವಕ್ರ್ಸ್ ಮೈಸೂರಿನ ರೊ. ಎಂ. ಜಗನ್ನಾಥ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಲಯ 4ರ ಸಹಾಯಕ ಗವರ್ನರ್ ರೊ.ಮೇಜರ್ ಡೋನರ್ ರಿತೇಶ್ ಬಾಳಿಗ ಕ್ಲಬ್ ಸಂಚಿಕೆ ರೋಟ್‍ವಾಲ್ ಬಿಡುಗಡೆಗೊಳಿಸಲಿದ್ದಾರೆ, ವಲಯ ಸೇನಾನಿ ರೊ. ಮಂಜುನಾಥ ಆಚಾರ್ಯ ಉಪಸ್ಥಿತರಿರುವರು ಎಂದರು.

ಸುದ್ದಿಗೋಷ್ಟಿಯಲ್ಲಿ ನಿಯೋಜಿತ ಕಾರ್ಯದರ್ಶಿ ಸ್ಮಿತಾ ಸಲ್ದಾನ, ವಲಯ 4ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ಪ್ರಮುಖರಾದ ಕೆ.ಎನ್.ಹೆಗ್ಡೆ, ಡಾ. ಪ್ರತಿಭಾ ಆತ್ಮರಂಜನ್ ರೈ, ವಿದ್ಯಾ ಎ.ರೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *