Header Ads
Breaking News

ಜು. 24 ಮತ್ತು 25ರಂದು ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಅಣುಕು ಸಿಇಟಿ ಪರೀಕ್ಷೆ

ಪ್ರಸ್ತುತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ, ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಮುಕ್ಕ ಇವರ ವತಿಯಿಂದ ಅಣುಕು ಸಿಇಟಿ ಪರೀಕ್ಷೆಯನ್ನು ಜುಲೈ 24 ಮತ್ತು 25ರಂದು ಏರ್ಪಡಿಸಲಾಗಿದೆ. ಸಿಇಟಿ ಪರೀಕ್ಷೆ ಎದುರಿಸುವ ಮಾಹಿತಿ ಮಾತ್ರವಲ್ಲದೇ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿಯನ್ನು ಕೊಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ ತಿಳಿಸಿದ್ದಾರೆ.

ಈ ಪರೀಕ್ಷೆಗಳು ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ವಿಷಯಗಳಲ್ಲಿ ನಡೆಸಲಾಗುತ್ತಿದೆ. ಪ್ರತಿಯೊಂದು ವಿಷಯದಲ್ಲಿ 60 ನಿಮಿಷಗಳ ಪರೀಕ್ಷೆ ಇದಾಗಿದ್ದು, ಜುಲೈ 24ರಂದು ಬೆಳಗ್ಗೆ 9ರಿಂದ 1ರ ಅವಧಿಯಲ್ಲಿ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2ರಿಂದ 5ರ ಅವಧಿಯಲ್ಲಿ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಜುಲೈ 25ರಂದು ಬೆಳಗ್ಗೆ 9ರಿಂದ 1ರ ಅವಧಿಯಲ್ಲಿ ಗಣಿತಶಾಸ್ತ್ರ ಪರೀಕ್ಷೆ ನಡೆಯಲಿದೆ. ಲಾಕ್‍ಡೌನ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಅಣುಕು ಪರೀಕ್ಷೆಯ ಉಪಯೋಗವನ್ನು ಪಡೆದು ಇದೇ ತಿಂಗಳ ಅಂತ್ಯದಲ್ಲಿ ನಡೆಯುವ ಸಿಇಟಿ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದಾಗಿದೆ. ಈ ಅಣುಕು ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿ’ಗೆ ಅಕರ್ಷಕ ರೀತಿಯಲ್ಲಿ ವಿದ್ಯಾರ್ಥಿವೇತನ ಹಾಗೂ ಶುಲ್ಕ ರಿಯಾಯಿತಿಯನ್ನು ಕೊಡಲಾಗುವುದೆಂದು ಪ್ರಾಂಶುಪಾಲರು ತಿಳಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ವತಿಯಿಂದ ಒಟ್ಟು 820 ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತಿದೆ.

ಆನ್‍ಲೈನ್ ಅಣುಕು ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಚಿಸುವ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪ್ರೊ.ವಿಶ್ವಾಸ್ ಶೆಟ್ಟಿ (9743289292) ಅಥವಾ ಡಾ.ಪ್ರವೀಣ್ ಬಿ (9980951075)ಇವರನ್ನು ಸಂಪರ್ಕಿಸಬಹುದಾಗಿದೆ.

Mail ID : : [email protected]

https://forms.gle/KPWwTYeqEtzVjwKh6

 

Related posts

Leave a Reply

Your email address will not be published. Required fields are marked *