Header Ads
Header Ads
Breaking News

ಜೂ. ೧೮ರಂದು ಕಾಪುವಿನಲ್ಲಿ ಚಲನಚಿತ್ರ ಅಭಿನಯ ತರಬೇತಿ,  ಶಿಬಿರದಲ್ಲಿ ಹೊಸಬರಿಗೆ ಮುಕ್ತ ಅವಕಾಶ

ಯುನಿಸೆಫ್ ಪ್ರಸಾರಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯೂನಿಕೇಷನ್ಸ್ ಕಟಪಾಡಿ, ಕರಾವಳಿ ಕಿರು ಚಿತ್ರೋತ್ಸವ ಪ್ರಶಸ್ತಿ ವಿಜೇತ ಕೆ. ಕೆ. ಪ್ರೊಡಕ್ಷನ್ಸ್ ಮೂಡುಬೆಳ್ಳೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಕಾಪು ಇವರ ಆಶ್ರಯದಲ್ಲಿ ಜೂ. ೧೮ರಂದು ಬೆಳಗ್ಗೆ ೯ರಿಂದ ಸಂಜೆ ೫ರತನಕ ಚಲನಚಿತ್ರ ಅಭಿನಯ ತರಬೇತಿ ಶಿಬಿರ ಶಿಕ್ಷಣ ಸಂಸ್ಥೆ ಸೆಮಿನಾರ್ ಹಾಲ್‌ನಲ್ಲಿ ನಡೆಯಲಿದೆ ಎಂದು ಆಡಳಿತಾಧಿಕಾರಿ ವಿ. ಕೆ. ಉದ್ಯಾವರ ಹೇಳಿದ್ದಾರೆ.
ವಿದ್ಯಾ ಸಂಸ್ಥೆಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ದಿಶಾ ಕಮ್ಯೂನಿಕೇಷನ್ಸ್ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ, ೧೮ರ ಬೆಳಿಗ್ಗೆ ೯.೩೦ಕ್ಕೆ ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಪಿ. ಆಚಾರ್ಯ ಶಿಬಿರವನ್ನು ಉದ್ಘಾಟಿಸಲಿದ್ದಾರೆ, ಈ ಶಿಬಿರದಲ್ಲಿ ಸುಮಾರು ೨೦೦ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಚಲನಚಿತ್ರ ಅಭಿನಯ, ತಾಂತ್ರಿಕ ತರಬೇತಿ ಸೇರಿದಂತೆ ಸಿನೆಮಾ ಆಡಿಶನ್ ಕೂಡಾ ನಡೆಯಲಿದ್ದು, ಹೊಸ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರನಟ ಪೃಥ್ವಿ ಅಂಬರ್, ಚಿತ್ರನಟಿ ಕುಮಾರಿ ಸ್ವಾತಿ ಎಸ್. ಬಂಗೇರ, ಹೆಬ್ರಿ ಚಾಣಕ್ಯ ಎಜ್ಯುಕೇಶನ್ ಅಕಾಡೆಮಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಭಾಗವಹಿಸುವರು. ಈ ಸಂದರ್ಭ ರಾಷ್ಟ್ರ ಪ್ರಶಸ್ತಿ ವಿಜೇತ ಮದಿಪು ಚಿತ್ರದ ನಟಿ ಸುಜಾತ ಶೆಟ್ಟಿ ಪೆರಿಂಜೆ, ಚಿತ್ರನಟ ರಘು ಪಾಂಡೇಶ್ವರ ಅವರನ್ನು ಸನ್ಮಾನಿಸಲಾಗುವುದು ಎಂದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕಿರುತೆರೆ ನಟ ಸುರೇಶ್ ಎರ್ಮಾಳ್, ಚಲನಚಿತ್ರ ನಟಿ ಸುಜಾತ ಶೆಟ್ಟಿ ಪೆರಿಂಜೆ, ಚಿತ್ರನಿರ್ದೇಶಕ ಜಯಪ್ರಕಾಶ್ ಸಿ. ಎಸ್. ಮಂಗಳೂರು. ಫಿಲ್ಮ್ ಮತ್ತು ನ್ಯೂಸ್ ಎಡಿಟರ್ ಸುಬ್ರಹ್ಮಣ್ಯ ಐರೋಡಿ, ತುಳು ಸಾಹಿತ್ಯಕಾರ ದಯಾನಂದ ಶೆಟ್ಟಿ ದೆಂದೂರ್ ಬಾಗವಹಿಸಲಿರುವರು ಎಂದರು.

Related posts

Leave a Reply