Header Ads
Breaking News

ಜೂ.30ರಂದು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕಾರ್ಕಳದಲ್ಲಿ ರಕ್ತದಾನ ಶಿಬಿರ

ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕಾರ್ಕಳ ಬಂಡೀಮಠದ ಸರಕಾರಿ ಭವನದಲ್ಲಿ ರೋಗಿಗಳಿಗೆ ಕ್ಲಪ್ತ ಸಮಯಕ್ಕೆ ರೋಗಿಗೆ ರಕ್ತ ಸಿಗಬೇಕು ಎಂಬ ಉದ್ದೇಶದಿಂದ ಜೂನ್ 30ರಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ಡಾಕ್ಟರ್ ರಾಮಚಂದ್ರ ಜೋಷಿ ಹೇಳಿದರು. ಅವರು, ಕಾರ್ಕಳದ ಖಾಸಗಿ ಹೋಟೆಲಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಒಂದು ಅಂಗ ಕಾರ್ಕಳದಲ್ಲಿ ಕೆಲಸ ಮಾಡುತ್ತಿದ್ದು ರೋಗಿಗಳಿಗೆ ಕ್ಲಪ್ತ ಸಮಯಕ್ಕೆ ರೋಗಿಗೆ ರಕ್ತ ಸಿಗಬೇಕು ಎಂಬ ಉದ್ದೇಶ ಇದರದ್ದಾಗಿದೆ. ನಾವು ಹಲವು ವರ್ಷದಿಂದ ಇಂತಹ ಕೆಲಸವನ್ನು ಮಾಡುತ್ತಿದ್ದು, ಕಳೆದ ವರ್ಷ ನಾವು ರಕ್ತ ಸಂಗ್ರಹಿಸುವ ಹಲವಾರು ಕೆಲಸವನ್ನು ಮಾಡಿರುತ್ತೇವೆ ಎಂದು ಹೇಳಿದರು. ಕಾರ್ಕಳ ತಾಲ್ಲೂಕಿನ ಸರಕಾರಿ ನೌಕರರು ಹಾಗೂ ಖಾಸಗಿ ಮತ್ತು ಸರಕಾರಿ ವೈದ್ಯರು ರಕ್ತದಾನ ಮಾಡಲಿದ್ದಾರೆ. ಈ ಶಿಬಿರದಲ್ಲಿ ಹಲವಾರು ಸಂಘ ಸಂಸ್ಥೆಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ.ಶಶಿಕಾಂತ ಆಚಾರ್ ಡಾ.ಬಿಎಂ ಕಿಣಿ. ಡಾ. ಸಚ್ಚಿದಾನಂದ ಪ್ರಭು ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *