Header Ads
Breaking News

ಜೂ.9ರಂದು ಕೂಳೂರು ಗೋಲ್ಡ್‍ಫಿಂಚ್ ಸಿಟಿ ಗ್ರೌಂಡ್‍ನಲ್ಲಿ ಮಾಂಡೊವಿ ಮೋಟಾರ್ಸ್ ಆಟೋಕ್ರಾಸ್-2019 ನಡೆಯಲಿದೆ

ಮಂಗಳೂರು ಮೋಟಾರ್ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಮಾಂಡೊವಿ ಮೋಟಾರ್ಸ್ ಆಟೋಕ್ರಾಸ್-2019 ಸ್ಪರ್ಧೆಯು ಜೂನ್ 9ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಮಂಗಳೂರು ಮೋಟಾರ್ಸ್ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಧೀರ್ ಬಿ.ಕೆ. ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 9ರಂದು ಮಂಗಳೂರಿನ ಕೂಳೂರಿನಲ್ಲಿರುವ ಗೋಲ್ಡ್‍ಫಿಂಚ್ ಸಿಟಿ ಗ್ರೌಂಡ್‍ನಲ್ಲಿ ಮಾಂಡೊವಿ ಮೋಟಾರ್ಸ್ ಆಟೋಕ್ರಾಸ್-2019 ನಡೆಯಲಿದೆ. ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.  ಇದೇ ವೇಳೆ ಮಾತನಾಡಿದ ಕರಾವಳಿ ಆಟೋಮೋಟಿವ್ ಸ್ಪೋಟ್ರ್ಸ್ ಕ್ಲಬ್‍ನ ಸ್ಥಾಪಕ ಸದಸ್ಯ ಅನ್ವರ್ ಮಂಗಳೂರು ಮೋಟಾರ್ ಸ್ಪೋಟ್ರ್ಸ್ ಅಸೋಸಿಯೇಷನ್ ನಡೆದುಕೊಂಡು ಬಂದ ಹಾದಿಯ ಬಗ್ಗೆ ವಿವರಿಸಿದರು. ಈ ಸಂದರ್ಭ ಮಂಗಳೂರು ಮೋಟಾರ್ ಸ್ಪೋಟ್ರ್ಸ್ ಅಸೊಸಿಯೇಷನ್‍ನ ಪದಾಧಿಕಾರಿ ಸಲ್ದಾನ, ಮಾಧ್ಯಮ ಪ್ರಮುಖರಾದ ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *