Header Ads
Header Ads
Breaking News

ಜೆಡಿಎಸ್ ಪಕ್ಷಕ್ಕೆ ಸಿದ್ಧಾಂತವೇ ಇಲ್ಲ ಸಹಾಯ ಮಾಡಿದವರ ಜೊತೆಗೆ ಹೋಗುವ ಪಾರ್ಟಿ ಅದು : ದಿನೇಶ್ ಗುಂಡೂರಾವ್ ಹೇಳಿಕೆ

ಜೆಡಿಎಸ್ ಒಮ್ಮೆ ಸ್ನೇಹ, ಒಮ್ಮೆ ದ್ವೇಷ ಬೆಳೆಸುವ ಪಕ್ಷ. ಜೆಡಿಎಸ್ ಪಕ್ಷಕ್ಕೆ ಸಿದ್ಧಾಂತವೇ ಇಲ್ಲ. ಸಹಾಯ ಮಾಡಿದವರ ಜೊತೆಗೆ ಹೋಗುವ ಪಾರ್ಟಿ ಅದು. ಜೆಡಿಎಸ್ ಗೆ ಜಾತ್ಯಾತೀತ ನಿಲುವು ಇಲ್ಲ ಅಂತ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಉಡುಪಿಯಲ್ಲಿ ಬಿಜೆಪಿ-ಜೆಡಿಎಸ್ ಉಪಚುನಾವಣೆ ಒಪ್ಪಂದ ವಿಚಾರದ ಬಗ್ಗೆ ಮಾತನಾಡಿದ ಅವರು ದೇವೇಗೌಡ-ಯಡಿಯೂರಪ್ಪ ಯಾರು ಸತ್ಯ ಯಾರು ಸುಳ್ಳು ಈ ಗೊಂದಲ ಸೃಷ್ಟಿ ಮಾಡಿದ್ದು ಜೆಡಿಎಸ್ ಪಕ್ಷದವರು. ಕುಮಾರಸ್ವಾಮಿ ಹೇಳಿಕೆಗಳು ಅವಮಾನಕ್ಕೆ ಕಾರಣವಾಗಿತ್ತು.ಮುಂದೆ ಏನು ಮಾಡುತ್ತಾರೊ ಅವರಿಗೆ ಬಿಟ್ಟದ್ದು. ನಾವು ಬಿಜೆಪಿ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ ಎಂದರು. ಆಡಿಯೋ ಕೋರ್ಟ್‌ನ ಗಮನಕ್ಕೆ ಬಂದಿದೆ. ಯಡಿಯೂರಪ್ಪ, ಅಮಿತ್ ಶಾ ಪಾತ್ರ ಜಗಜ್ಜಾಹಿರಾಗಿದೆ. ಸಂವಿಧಾನ ಬಾಹಿರ ಕೆಲಸದಲ್ಲಿ ಅಮಿತ್ ಶಾ ಶಾಮೀಲಾಗಿದ್ದಾರೆ.ಬಿಜೆಪಿಯವರ ನೇತೃತ್ವದಲ್ಲಿ ನಡೆದದ್ದೆಲ್ಲಾ ಸಂವಿಧಾನ ಕಾನೂನು ಒಪ್ಪುತ್ತಾ.? ಕಾಂಗ್ರೆಸ್‌ಗೆ ಒಂದು ನ್ಯಾಯ ಬಿಜೆಪಿಗೆ ಒಂದ ನ್ಯಾಯನಾ? ಅಂತ ಪ್ರಶ್ನಿಸಿದರು. ಈಶ್ವರಪ್ಪನಿಗೆ ಸ್ವಾಭಿಮಾನ ಇಲ್ಲ. ಸ್ವಾಭಿಮಾನಿ ಆಗಿದ್ದರೆ ಮಂತ್ರಿ ಆಗಬಾರದಿತ್ತು.ಉಪಮುಖ್ಯಮಂತ್ರಿ ಯಾಗಿದ್ದವರು ಈಗ ಮಂತ್ರಿಯಾಗಿದ್ದಾರೆ. ಜೂನಿಯರ್‌ಗಳು ಡಿಸಿಎಂ ಆಗಿರುವಾಗ ಇವರು ಮಂತ್ರಿಯಾಗಿದ್ದಾರೆ. ಈಶ್ವರಪ್ಪನಿಗೆ ಯಾವುದೇ ಕಮಿಟ್ ಮೆಂಟ್ ಇಲ್ಲ.. ಅಹಿಂದ ಪರ ಒಂದೇ ಒಂದು ಹೋರಾಟ ಮಾಡಿಲ್ಲ. ಸುದ್ದಿಯಾಗೋದೇ ಈಶ್ವರಪ್ಪನ ಅಪೇಕ್ಷೆ. ಈಶ್ವರಪ್ಪನಿಗೆ ಗಂಭೀರತೆಯಿಲ್ಲ, ಗಹನವಾಗಿ ಮಾತನಾಡಲ್ಲ ಎಂದರು.

 

Related posts

Leave a Reply

Your email address will not be published. Required fields are marked *