Header Ads
Breaking News

ಜೆಸಿಐ ನೂತನ ಅಧ್ಯಕ್ಷರಾಗಿ ನವೀನ್‌ಕುಮಾರ್ ಜೈನ್ ಪದಗ್ರಹಣ

ಎಸ್.ಡಿ.ಎಂ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನವೀನ್ ಕುಮಾರ್ ಜೈನ್ ಉಜಿರೆ ಜೆ.ಸಿ.ಐ ವಲಯದ ಪ್ರಸಕ್ತ ವರ್ಷದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಇವರೊಂದಿಗೆ ದೀಕ್ಷಿತ್ ರೈ, ಸೌಮ್ಯ ನವೀನ್, ಪ್ರಜ್ವಲ್ ಅವರೂ ಪದಾಧಿಕಾರಿಗಳ ಹುದ್ದೆಯ ಅಧಿಕಾರ ಸ್ವೀಕರಿಸಿದರು. ಉಜಿರೆಯ ವನರಂಗ ಸಭಾಂಗಣದಲ್ಲಿ ಆಯೋಜನೆಗೊಂಡ ಕಾರ್ಯಕ್ರಮ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಸಾಕ್ಷಿಯಾಯಿತು. ಜೆ.ಸಿ.ಐ ಅಧ್ಯಕ್ಷ ನವೀನ್ ಕುಮಾರ್ ಜೈನ್ ಈ ಸಂದರ್ಭದಲ್ಲಿ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಹಮ್ಮಿಕೊಳ್ಳಲಿರುವ ಉದ್ದೇಶಿತ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಮಾಜಕ್ಕೆ ಒಳಿತನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ಸಮಾಜದಿಂದಲೂ ಒಳಿತಿನ ಕೊಡುಗೆಯೇ ಲಭಿಸುತ್ತದೆ. ಸಾಮಾಜಿಕವಾಗಿ ಉಪಯುಕ್ತ ಎನ್ನಿಸುವ ಒಳಿತಿನ ಕಾರ್ಯಚಟುವಟಿಕೆಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜೆಸಿಐ ಕಾರ್ಯಕಾರಿ ಸಮಿತಿಯ ಮಾಜಿ ಅಧ್ಯಕ್ಷ ಪುರಂದರ ತರಬೇತಿಯ ಮೂಲಕ ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಅಗತ್ಯವನ್ನು ಪ್ರತಿಪಾದಿಸಿದರು. ಒಬ್ಬ ಯಶಸ್ವಿ ನಾಯಕ ಯಾವುದೇ ಸಂದರ್ಭದಲ್ಲೂ ಇನ್ನೊಬ್ಬರನ್ನು ದೂರುವುದಾಗಲಿ ಕುಗ್ಗಿಸುವುದಾಗಲಿ ಅಥವಾ ನಿಂದಿಸುವುದಾಗಲಿ ಮಾಡುವುದಿಲ್ಲ. ಆತ ಸಮಾಜಕ್ಕೆ ತನ್ನಿಂದ ಯಾವ ರೀತಿಯ ಕೊಡುಗೆ ನೀಡಬಹುದು ಎಂಬುದನ್ನು ಮಾತ್ರವೇ ಯೋಚಿಸುತ್ತಾನೆ. ನಾಯಕನಾದವನು ಉತ್ತಮ ವಾಗ್ಮಿಯಾಗಿದ್ದು ಎಂದಿಗೂ ಸತ್ಯ ಮಾರ್ಗದಲ್ಲಿ ನಡೆಯುವ ನಿಲುವನ್ನು ಹೊಂದಿರಬೇಕು ಎಂದು ನುಡಿದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಜೆ.ಸಿ.ಐ ವಲಯಾಧ್ಯಕ್ಷ ಜೆ.ಎಫ್.ಪಿ ಕಾರ್ತಿಕೇಯ ಮಧ್ಯಸ್ಥ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ತುಡಿತ ಅಡಗಿರುತ್ತದೆ. ಜೆ.ಸಿ.ಐಯಂಥ ಸಮಾಜಮುಖಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವುದು ಹೆಮ್ಮೆಯ ವಿಚಾರ. ಅದೇರೀತಿ ವರ್ಷವಿಡೀ ವಿನೂತನ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಪೂರ್ವತಯಾರಿಯ ಅವಶ್ಯಕತೆಯಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿ ಜೆ.ಸಿ.ಐ ವಲಯ ಉಪಾಧ್ಯಕ್ಷ ಎಚ್.ಜಿ.ಎಫ್ ಮೇಧಾವಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆಅಬ್ದುಲ್ ಕಲಾಂ ಆಶಯದಂತೆ ೨೦೨೦ರ ಕನಸಿನ ಭಾರತವನ್ನು ಸನ್ನದ್ಧಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಕಾರ್ಯಕ್ರಮವನ್ನು 2019ನೇ ಸಾಲಿನ ಜೆ.ಸಿ.ಐಯ ಅಧ್ಯಕ್ಷ ಸಂಪತ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸದರು. ನೂತನವಾಗಿ ಆಯ್ಕೆಗೊಂಡ ಕಾರ್ಯದರ್ಶಿ ದೀಕ್ಷಿತ್‌ರೈ ವಂದಿಸಿದರು.

Related posts

Leave a Reply

Your email address will not be published. Required fields are marked *