Header Ads
Header Ads
Breaking News

ಜೆಸಿಐ ಮಂಗಳೂರು ಸಾಮ್ರಾಟ್‌ನಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ರಥಬೀದಿಯ ಸರಕಾರಿ ಪ್ರಥಮ ದರ್ಜೆಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಜೆಸಿಐ ಮಂಗಳೂರು ಸಾಮ್ರಾಟ್ ಪ್ರಾಯೋಜಕತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಸೆಝ್‌ನ ಪಿಆರ್‌ಓ  ರಾಮಚಂದ್ರ ಭಂಡಾರ್‍ಕರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಮಂಗಳೂರು ಸಾಮ್ರಾಟ್‌ನ ಅಧ್ಯಕ್ಷೆ ಜೆಸಿ ಎಚ್‌ಜಿಎಫ್ ಅಶ್ವಿನಿ ಐತಾಳ್ ವಹಿಸಿದ್ದರು.  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್. ಕಾರ್ಯದರ್ಶಿ ಜೆಸಿ ಎಚ್‌ಜಿಎಫ್  ಪಲ್ಲವಿ ರಾಜೇಶ್, ಜೆಸಿಐ ಸೆನೆಟರ್ ಡಾ. ರಾಘವೇಂದ್ರ ಹೊಳ್ಳ ಎನ್., ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ಡಾ. ಗೀತಾ ಎಮ್.ಎಲ್., ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಮಹೇಶ್ ಕೆ.ಬಿ., ಜೆಸಿಐ ಸದಸ್ಯರಾದ ಜೆಸಿ ಶಾರದಾ ದಿನೇಶ್ ನಾಯಕ್, ಜೆಸಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply