Header Ads
Header Ads
Header Ads
Breaking News

ಜೆಸಿ‌ಐ ಸಪ್ತಾಹ-2017 ಸೆ.9ರಿಂದ 15 ರ ವರೆಗೆ ಆಯೋಜನೆ ಜೆಸಿ‌ಐ ವಿಟ್ಲ ವತಿಯಿಂದ ಕಾರ್ಯಕ್ರಮ

ಜೇಸಿ‌ಐ ವಿಟ್ಲ ಇದರ ವತಿಯಿಂದ ಸೆ.೯ರಿಂದ ಸೆ.೧೫ರ ವರೆಗೆ ಜೇಸಿ‌ಐ ಸಪ್ತಾಹ-2017 ನಡೆಯಲಿದೆ ಎಂದು ಜೇಸಿ‌ಐ ಅಧ್ಯಕ್ಷ ರಮೇಶ್ ಬಿ.ಕೆ ತಿಳಿಸಿದ್ದಾರೆ.

ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಸೆ.9ರಂದು ಬೆಳಿಗ್ಗೆ ವಿಟ್ಲ ಮಾದರಿ ಹಿ.ಪ್ರಾ ಶಾಲೆಯ ಶತಮಾನೋತ್ಸವ ಭವನದಲ್ಲಿ ಜೇಸಿ ಸಪ್ತಾಹದ ಉದ್ಘಾಟನೆ ನಡೆಯಲಿದೆ.


ಮಾದರಿ ಹಿ.ಪ್ರಾ ಶಾಲಾ ಎಸ್‌ಡಿ‌ಎಂಸಿ ಗೌರವಾಧ್ಯಕ್ಷ ಸುಬ್ರಾಯ ಪೈಯವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ವಿಟ್ಲ ಜೇಸಿ‌ಐ ಅಧ್ಯಕ್ಷ ರಮೇಶ್ ಬಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟ್ವಾಳ ತಾಲೂಕು ಪ.ಪೂ ಕಾಲೇಜು ವಿದ್ಯಾರ್ಥಿಗಳಿಗೆ ’ರಂಗಿತೊದ ನಲಿಪು’ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ನಡೆಯಲಿದೆ. ಸಾಯಂಕಾಲ ವೈಷ್ಣವಿ ನವರಾಜ್ ಸಾರಥ್ಯದಲ್ಲಿ ನಾದಚಿತ್ತಾರ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷರು ಬಾಬು ಕೆ.ವಿ, ಕಾರ್ಯದರ್ಶಿ ರಾಜಶೇಖರ್, ಪೂರ್ವ ಅಧ್ಯಕ್ಷ ಅಣ್ಣಪ್ಪ ಶಾಸ್ತಾನ ಉಪಸ್ಥಿತರಿದ್ದರು.

Related posts

Leave a Reply