Breaking News

ಜೇಮ್ಸ್ ಬಾಂಡ್ ಖ್ಯಾತಿಯ ರೋಜರ್ ಮೂರ್, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಎಂಬತ್ತೊಂಬತ್ತರಲ್ಲಿ ಸಾವು

ಜೇಮ್ಸ್ ಬಾಂಡ್ ಪಾತ್ರಗಳ ಖ್ಯಾತಿಯ ಬ್ರಿಟಿಷ್ ನಟ ರೋಜರ್ ಮೂರ್ ಎಂಬತ್ತೊಂಬತ್ತರ ಪ್ರಾಯದಲ್ಲಿ ನಿಧನರಾದರು. ಸ್ವಿಟ್ಜರ್ಲೆಂಡ್ನಲ್ಲಿ ವಾಸವಾಗಿದ್ದ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.
ನಮ್ಮ ತಂದೆ ಸರ್ ರೋಜರ್ ಮೂರ್ ಮಂಗಳವಾರ ನಿಧನರಾಗಿದ್ದಾರೆ. ಈ ಹೃದಯ ವಿದ್ರಾವಕ ವಿಚಾರವನ್ನು ಭಾರ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ ಎಂದು ರೋಜರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ. ಕೊನೆಯ ದಿನಗಳಲ್ಲಿ ಅವರ ಸುತ್ತ ಇದ್ದವರು ತೋರಿದ ಪ್ರೀತಿಯನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ವಿವರಿಸಿದೆ. ಮೂರೆ ಲಂಡನ್ನ ಸ್ಟಾಕ್ವೆಲ್ನಲ್ಲಿ ೧೯೨೭ರ ಅಕ್ಟೋಬರ್ ೧೪ ರಂದು ಜನಿಸಿದ್ದರು. ಲಿವ್ ಆ್ಯಂಡ್ ಲೆಟ್ ಡೈ, ದ ಸ್ಪೈ ವ್ಹೂ ಲವ್ಡ್ ಮಿ, ಫಾರ್ ಯುವರ್ ಐಸ್ ಓನ್ಲಿ, ಮೂನ್ರ್ಯಾಕರ್, ದ ಮ್ಯಾನ್ ವಿಥ್ ದ ಗೋಲ್ಡನ್ ಗನ್, ಆಕ್ಟೋಪಸ್ಸಿ, ಎ ವ್ಯೂವ್ ಟು ಎ ಕಿಲ್ ಚಿತ್ರಗಳ ಬಾಂಡ್ ಪಾತ್ರಗಳ ಮೂಲಕ ರೋಜರ್ ಜನಪ್ರಿಯರಾಗಿದ್ದರು. ೧೯೭೩ರಿಂದ ೧೯೮೫ರ ನಡುವೆ ಏಳು ಪತ್ತೇದಾರಿ ಚಿತ್ರಗಳಲ್ಲಿ ನಟಿಸಿದ ಏಕೈಕ ನಟ ಎಂಬ ಹೆಗ್ಗಳಿಕೆ ಅವರದ್ದು.
ನಟನೆಯಲ್ಲದೆ ಮೂರೆ ಅವರು ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ತಾವು ಬಾಂಡ್ ಆದ ಬಗ್ಗೆ ಒಂದು ಪುಸ್ತಕ ರಚಿಸಿದ್ದರು. ‘ಮೈ ವರ್ಡ್ ಈಸ್ ಮೈ ಬಾಂಡ್’ ಇವರ ಆತ್ಮಕಥೆ. ಮೂರೆ ನಿಧನಕ್ಕೆ ವಿಶ್ವದಾದ್ಯಂತ ನಟರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ರೋಜರ್ ಭಾರತಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ೧೯೮೨ರಲ್ಲಿ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಬಂದಿದ್ದರು. ೨೦೦೫ರಲ್ಲಿ ಯುನಿಸೆಫ್ನ ಸೌಹಾರ್ದ ರಾಯಭಾರಿಯಾಗಿ ಐಯೋಡಿನ್ಯುಕ್ತ ಉಪ್ಪಿನ ಬಳಕೆ ಬಗ್ಗೆ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ಇವರ ಅಭಿನಯದ ‘ಅಕ್ಟೋಪಸಿ’ ಚಿತ್ರವನ್ನು ರಾಜಸ್ತಾನದ ಉದಯ ಪುರದಲ್ಲಿ ಚಿತ್ರೀಕರಿಸಲಾಗಿದೆ.

Related posts

Leave a Reply