Header Ads
Header Ads
Breaking News

ಜೇಸಿಐ ವಲಯ ಹದಿನೈದಕ್ಕೆ ಜೇಸಿಐ ಭಾರತದ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿಯೂ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ

ರಾಜಸ್ಥಾನದ ಜೈಪುರದಲ್ಲಿ ಜರಗಿದ 63ನೇ ರಾಷ್ಟ್ರೀಯ ಅಧಿವೇಶನದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಜೇಸಿಐ ವಲಯ ಹದಿನೈದಕ್ಕೆ ಜೇಸಿಐ ಭಾರತದ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿಯೂ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆÉ ಎಂದು 2018ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮತ್ತು ಜೇಸಿಐ ಇಂಡಿಯಾ ಫೌಂಡೇಷನ್ ನಿರ್ದೇಶಕ ವೈ. ಸುಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಅವರು ಕಾಪು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ವಲಯ ಹದಿನೈದರಲ್ಲಿ 2018ನೇ ಸಾಲಿನಲ್ಲಿ ಜೇಸಿಐ ಇಂಡಿಯಾ ಫೌಂಡೇಷನ್‍ಗೆ 14 ಲಕ್ಷ ರೂ. ದೇಣಿಗೆ, 18 ನೂತನ ಘಟಕಗಳ ಸ್ಥಾಪನೆ, 400ಕ್ಕೂ ಅಧಿಕ ಸದಸ್ಯರ ಸೇರ್ಪಡೆ, 375 ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಗಳಂತೆ ವಿದ್ಯಾರ್ಥಿ ವೇತನ ವಿತರಣೆ, 300ಕ್ಕೂ ಅಧಿಕ ಇಂಪ್ಯಾಕ್ಟ್ 2030 ಕಾರ್ಯಕ್ರಮಗಳು, 100ಕ್ಕೂ ಅಧಿಕ ಶಾಶ್ವತ ಯೋಜನೆಗಳ ಕೊಡಗೆ, ಕೇರಳ – ಕೊಡಗು ಸಂತ್ರಸ್ತರ ನಿದಿಗೆ 3ಲಕ್ಷ ರೂ. ಗೂ ಮಿಕ್ಕ ಹಣಕಾಸಿನ ಕೊಡುಗೆ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಹಸ್ತಾಂತರ, 2 ಸಾವಿರಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳ ಆಯೋಜನೆ, 1000ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಣೆ, 2000ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ ವಾಗ್ದಾನ ಮೊದಲಾದ ಮಹತ್ವಪೂರ್ಣವಾದ ಕಾರ್ಯಕ್ರಮಗಳು ನಡೆದಿದ್ದು ಇದನ್ನು ಆಧರಿಸಿ, ಪ್ರಶಸ್ತಿಗಳು ಲಭಿಸಿವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್, 2018ರ ನಿಕಟಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ., ವಲಯ ನಿರ್ದೇಶಕಿ ಸೌಮ್ಯ ರಾಕೇಶ್, ಜೇಸಿಐ ಕಾಪುವಿನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಉಪಸ್ಥಿತರಿದ್ದರು.

Related posts

Leave a Reply