Header Ads
Header Ads
Header Ads
Breaking News

ಜೇಸಿ ಸಪ್ತಾಹ 2017- ಹೊಂಗನಸು ೪೦ನೇ ವರ್ಷದ ಜೇಸಿ ಸಪ್ತಾಹ ಜೇಸಿಐ ಮಂಜುಶ್ರೀ, ಬೆಳ್ತಂಗಡಿ

 

 ಬೆಳ್ತಂಗಡಿ ಮಂಜುಶ್ರೀ ಜೇಸಿಐನ 80ನೇ ವರ್ಷದ ಜೇಸಿ ಸಪ್ತಾಹ 2017- ಹೊಂಗನಸು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಕರು ದೇಶದ ಅಮೂಲ್ಯ ಸಂಪತ್ತು. ಸುಸಂಸ್ಕೃತ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಯುವ ಜನತೆ ಮನಸು ಮಾಡಬೇಕು. ಸ್ವ ಅಭಿವೃದ್ಧಿಯ ಜೊತೆಗೆ ಸಮಾಜದ ಅಭಿವೃದ್ಧಿಯ ಕಡೆಗೆ ಸದಾ ಚಿಂತನಾಶೀಲರಾಗಬೇಕೆಂದು ಹೇಳಿದರು.

 ಜೆಸಿ ಸಪ್ತಾಹ 2017- ಹೊಂಗನಸು ಸೆಪ್ಟೆಂಬರ್ 15ರವರೆಗೆ ನಡೆಯಲಿದ್ದು, ಉದ್ಢಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಪಟ್ಟಣ ಪಂಚಾಯತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಜೆಸಿಐ ನಂತಹ ಸಂಸ್ಥೆಗಳು ಪಂಚಾಯಿತಿಯ ಅನೇಕ ಕಾರ್ಯಗಳಲ್ಲಿ ಸಹಭಾಗಿತ್ವವನ್ನು ವಹಿಸುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅನುಕೂಲವಾಗಿದೆ ಎಂದರು.

 ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ 15ದಂಪತಿಗಳು ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ತರಬೇತುದಾರ ರಾಜೇಂದ್ರ ಭಟ್ ನಿರೂಪಿಸಿದರು. ಸಮಾರಂಭದಲ್ಲಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್,ನಿಕಟಪೂರ್ವ ಅದ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ವಲಯಾಧಿಕಾರಿ ಚಿದಾನಂದ ಇಡ್ಯಾ, ಸಂಯೋಜಕ ಪ್ರಸಾದ್ ಕಕ್ಕಿಂಜೆ, ಸಹಸಂಯೋಜಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಶ್ವಿನಿ, ಬೆಳ್ತಂಗಡಿ.

Related posts

Leave a Reply