Header Ads
Header Ads
Breaking News

ಜೈ ಹನುಮಾನ್ ಕ್ರೀಡಾ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆ

ಜೈ ಹನುಮಾನ್ ಕ್ರೀಡಾ ಮಂಡಳಿ ಬಟ್ಟೆದಡಿ ಕುತ್ತಾರ್ ಇದರ ಮಹಿಳಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ಆರೋಗ್ಯ ಮತ್ತು ಕೌಟುಂಬಿಕ ಸಲಹಾ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಯೆನಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕೌನ್ಸಿಲರ್ ಮತ್ತು ವಿದ್ಯಾರ್ಥಿಗಳ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಸುನಿತಾ ಪ್ರಭು  ಭಾಗವಹಿಸಿ ಕುಟುಂಬ ಜೀವನ, ಪ್ರೀತಿ, ಪೋಷಕರ ಪಾತ್ರ, ಮಹಿಳೆಯರ ಆರೋಗ್ಯ ಹಾಗೂ ಮಹಿಳೆಯರ ಜೀವನ ಶೈಲಿಯ ಸಮತೋಲನ ಹಾಗೂ ಉತ್ತಮ ಆರೋಗ್ಯದ ಗುಟ್ಟು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಗಾಣದಮನೆ ವಹಿಸಿದ್ದರು. ಈ ವೇಳೆ ಭಾಗೀರಥಿ,  ಲಿಮಿತ , ತೇಜಶ್ರಿ‌ ಕಂಪ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *