Breaking News

ಜೊಹಾನ್ಸ್‌ಬರ್ಗ್ ಹಾಕಿ ವಿಶ್ವ ಲೀಗ್, ಗೆದ್ದು ಎಂಟರ ಘಟ್ಟಕ್ಕೆ ಭಾರತದ ಮಹಿಳೆಯರು

ಭಾರತ ಮಹಿಳಾ ತಂಡ ಹಾಕಿ ವಿಶ್ವ ಲೀಗ್ ಸೆಮಿ ಫೈನಲ್ನ ಎಂಟರ ಘಟ್ಟ ಪ್ರವೇಶಿಸಿತು. ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ಪ್ರೀತಿ ದುಬೆ ಗಳಿಸಿದ ಏಕೈಕ ಗೋಲಿನ ಬಲದಿಂದ ಜೊಹಾನ್ಸ್ಬರ್ಗ್ನಲ್ಲಿ ಚಿಲಿ ವಿರುದ್ಧ ಭಾರತ ಜಯ ಸಾಧಿಸಿತು.
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದ ಭಾರತ ಅನಂತರ ಬಲಿಷ್ಠ ಅಮೆರಿಕ ಎದುರು ೧-೪ರಿಂದ ಸೋಲು ಕಂಡಿತ್ತು.
ಬುಧವಾರದ ಪಂದ್ಯದಲ್ಲಿ ಅತ್ಯುತ್ತಮ ಆಟ ಆಡಿ ಗೆಲುವು ತನ್ನದಾಗಿ ಸಿಕೊಂಡಿತು. ಪೆನಾಲ್ಟಿ ಕಾರ್ನರ್ ಸೇರಿದಂತೆ ಕೆಲವು ಉತ್ತಮ ಅವಕಾಶ ಗಳನ್ನು ಭಾರತ ಕೈಚೆಲ್ಲಿತು. ಇಲ್ಲವಾದರೆ ತಂಡದ ಖಾತೆಯಲ್ಲಿ ಗೋಲುಗಳ ಸಂಖ್ಯೆ ಹೆಚ್ಚುತ್ತಿತ್ತು.
ಮೊದಲ ಅರ್ಧದಲ್ಲಿ ಗೋಲು ಗಳಿಸದೆ ನಿರಾಸೆ ಅನುಭವಿಸಿದ ಎರಡೂ ತಂಡದವರು ದ್ವಿತೀಯಾರ್ಧದಲ್ಲಿ ಎಲ್ಲ ಸಾಮರ್ಥ್ಯ ಒಟ್ಟುಗೂಡಿಸಿ ಅಂಗಳಕ್ಕೆ ಇಳಿದರು. ಭಾರತಕ್ಕೆ ಫಲ ಸಿಕ್ಕಿತು. ೩೮ನೇ ನಿಮಿಷದಲ್ಲಿ ರಾಣಿ ಮತ್ತು ಪ್ರೀತಿ ಎದುರಾಳಿ ತಂಡದ ರಕ್ಷಣಾ ವಿಭಾಗವನ್ನು ವಂಚಿಸಿ ಮುನ್ನುಗ್ಗಿದರು. ಪ್ರೀತಿ ಅವರು ಗೋಲು ಗಳಿಸಿ ತಂಡದಲ್ಲಿ ಹರ್ಷ ಉಕ್ಕಿಸಿದರು. ಮರುಕ್ಷಣದಲ್ಲೇ ಪ್ರೀತಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದರೂ ಚಿಲಿ ಗೋಲ್ ಕೀಪರ್ ಭಾರತದ ಆಟಗಾರ್ತಿಯ ಶ್ರಮವನ್ನು ವ್ಯರ್ಥಗೊಳಿಸಿದರು.

Related posts

Leave a Reply