Header Ads
Header Ads
Breaking News

ಜೋಡುಪಾಲ ಪ್ರಕೃತಿ ವಿಕೋಪ ಹಿನ್ನಲೆ:ನಿರಾಶ್ರಿತರ ಬಸ್ಸ್ ಪಾಸ್ ನವೀಕರಣ

ಬೆಳ್ಳಾರೆ : ಜೋಡುಪಾಲ ಪ್ರಕೃತಿ ವಿಕೋಪ ಸಂಭವಿಸಿ ನಿರಾಶ್ರಿತರಾಗಿ ಸಂಪಾಜೆ ಮತ್ತು ಕಲ್ಲುಗುಂಡಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವವರಿಗೆ ನೀಡಿದ ಕೆ.ಎಸ್.ಆರ್.ಟಿ.ಸಿ ಬಸ್ಸ್ ಪಾಸನ್ನು ಮತ್ತೆ ೧೫ ದಿವಸಗಳ ಬಳಿಕ ನವೀಕರಿಸಲಾಗಿದೆ.
ಎರಡು ತಿಂಗಳ ಹಿಂದೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನಿರಾಶ್ರಿತರ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಿರಾಶ್ರಿತರು ತಮಗೆ ಉಚಿತ ಪಾಸ್ ನೀಡಬೇಕೆಂದು ಒತ್ತಾಯಿಸಿದ ಹಿನ್ನಲೆಯಲ್ಲಿ ಸಚಿವರು ನಿರಾಶ್ರಿತರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಲ್ಲಿ ಸಂಚಾರಿಸಲು ಉಚಿತ ಪಾಸ್‌ನ ವ್ಯವಸ್ಥೆ ಮಾಡಿದ್ದರು. ಒಂದು ತಿಂಗಳು ನಿರಾಶ್ರಿತರು ಉಚಿತವಾಗಿ ಬಸ್ಸಲ್ಲಿ ಪ್ರಯಾಣ ಮಾಡಿದ್ದಾರೆ. ಬಳಿಕ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಪಾಸನ್ನು ನವೀಕರಿಸದೆ ಸತಾಯಿಸುತ್ತಿದ್ದರು.

ಅಲ್ಲದೆ ವಿದ್ಯಾರ್ಥಿಗಳಿಗೆ ನೀಡಿದ್ದ ಬಸ್ಸ್ ಪಾಸಿನ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳಿಗೂ ಬಸ್ಸ್ ಪಾಸನ್ನು ನವೀಕರಿಸಿ ಕೊಡುವುದಿಲ್ಲ ಎಂದು ಹೇಳಿದ್ದರು. ಈ ಕಾರಣದಿಂದ ನಿರಾಶ್ರಿತ ಕೇಂದ್ರದಲ್ಲಿರುವ ಜನರು ತಮ್ಮ ಭೂಮಿ ಇರುವ ಜಾಗ ಜೋಡುಪಾಲ ಮತ್ತು ಮೊಣ್ಣಂಗೇರಿಗೆ ದಿನ ನಿತ್ಯ ಹೋಗಿ ಬರಲು ಹಾಗೂ ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ತೆರಳಲು ಹಣ ನೀಡಬೇಕಾಗಿತ್ತು. ಈ ಬಗ್ಗೆ ವಿಸ್ತೃತ ವರದಿಯನ್ನು ವಿ೪ನಲ್ಲಿ ಪ್ರಸಾರ ಮಾಡಲಾಗಿತ್ತು.
ಕೊಡಗು ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ ೨೪ ಕುಟುಂಬ ವಾಸವಿದ್ದು 73 ಜನರಿದ್ದಾರೆ. ಇವರಲ್ಲಿ13 ಮಂದಿ ಶಾಲಾ ಮಕ್ಕಳು. ದ.ಕ ಸಂಪಾಜೆ ಕಲ್ಲುಗುಂಡಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 11 ಕುಟುಂಬ ವಾಸ ಇದ್ದು 42 ಜನರಿದ್ದಾರೆ. ಇವರಲ್ಲಿ ೯ ಮಂದಿ ಶಾಲಾ ಮಕ್ಕಳಿದ್ದಾರೆ. ಒಬ್ಬರು ಅನಾರೋಗ್ಯಕ್ಕೀಡಾದ 80ವರ್ಷ ಪ್ರಾಯದ ವೃದ್ದೆ ಇದ್ದಾರೆ.

Related posts

Leave a Reply