Header Ads
Header Ads
Breaking News

ಜೋಡುಪಾಲ ವಾಸಯೋಗ್ಯವಲ್ಲವೆಂದು ಭೂವಿಜ್ಞಾನಿಗಳ ವರದಿ: ಪರ್ಯಾಯ ಮಾರ್ಗದತ್ತ ಜನರ ಚಿಂತನೆ

ಬೆಳ್ಳಾರೆ : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜೋಡುಪಾಲದಲ್ಲಿ ಇನ್ನೂ ಪೂರ್ಣ ಪ್ರಮಾಣದ ವಾಹನ ಸಂಚಾರಕ್ಕೆ ಸಾಧ್ಯವಾಗದ ಹಿನ್ನಲೆಯಲ್ಲಿ ಮತ್ತೆ ಪರ್ಯಾಯ ರಸ್ತೆ ನಿರ್ಮಾಣದ ಬಗ್ಗೆ ಕೊಡಗಿನ ಜನರು ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ದ.ಕ ಜಿಲ್ಲೆಯ ಜನರು ಉತ್ಸುಕರರಾಗಿದ್ದಾರೆ.ಜೋಡುಪಾಲದಲ್ಲಿ ಸಂಭವಿಸಿದ ಭೂಕುಸಿತದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಭೂ ವಿಜ್ಞಾನಿಗಳು ಜೋಡುಪಾಲ ಭಾಗ ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸಿದ್ದರಿಂದ, ಇಲ್ಲಿ ನಿರ್ಮಾಣವಾದ ರಸ್ತೆ ಮಳೆಗಾದಲ್ಲಿ ಯಾವ ಸಂದರ್ಭದಲ್ಲೂ ಬೇಕಾದರೂ ಕುಸಿಯಬಹುದು ಎಂದು ಆತಂಕ ಹೊಂದಿದ್ದಾರೆ.ಮಾಣಿ_ ಮೈಸೂರು ರಾಜ್ಯ ರಸ್ತೆ ಇನ್ನೂ ಪೂರ್ಣ ವಾಹನ ಸಂಚಾರಕ್ಕೆ ಜೋಡುಪಾಲದಲ್ಲಿ ತೆರೆದುಕೊಂಡಿಲ್ಲ. ಮಾಣಿ – ಮೈಸೂರು ರಸ್ತೆಯನ್ನು ಚತುಷ್ಪದ ರಸ್ತೆಯನ್ನಾಗಿ ಮಾಡಲು ತಯಾರಿ ನಡೆಯುತ್ತಿದ್ದು ಜೋಡುಪಾಲದಲ್ಲಿ ರಸ್ತೆಯ ಧಾರಾಣಾ ಸಾಮಾಥ್ಯದ ಬಗ್ಗೆ ಜನರಲ್ಲಿ ತಾಂತ್ರಿಕ ತಜ್ಞರಲ್ಲಿ ಸಂಶಯವಿದೆ. ಈ ರಸ್ತೆಯ ಬದಲಾಗಿ ಇನ್ನೊಂದು ರಾಜ್ಯ ಹೆದ್ದಾರಿ ನಿರ್ಮಿಸಿದರೆ ಜನರಿಗೆ ಅನುಕೂಲವಾಗಬಹುದು. ಈಗಿರುವ ರಸ್ತೆಯಲ್ಲಿ ಹುಣೂಸೂರುನಿಂದ ಮಡಿಕೇರಿಯಾಗಿ ಸುಳ್ಯಕ್ಕೆ 131 ಕಿ.ಮೀ ದೂರವಾಗುತ್ತದೆ. ಬದಲಾಗಿ ಹುಣುಸೂರುನಿಂದ ವಿರಾಜಪೇಟೆ – ಭಾಗಮಂಡಲಕ್ಕಾಗಿ ಪಟ್ಟಿ- ತೊಡಿಕಾನ- ಕೊಡಗಿನ ಪೆರಾಜೆಯಾಗಿ ಬಂದರೆ 145 ಕಿ.ಮೀ ದೂರವಾಗುತ್ತದೆ.ಹುಣುಸೂರು – ಭಾಗಮಂಡಲ (ರಾಜ್ಯ ಹೆದ್ದಾರಿ) 109 ಕಿ.ಮೀ,ಭಾಗಮಂಡಲ- ಬಾಚಿಮಲೆ(ಅಂತರ್ ರಾಜ್ಯ ಹೆದ್ದಾರಿ) 9.ಕಿ.ಮೀ,ಬಾಚಿಮಲೆ-ಪಟ್ಟಿ-ತೊಡಿಕಾನ (ಅಭಿವೃದ್ದಿ ಆಗಬೇಕಾದ ರಸ್ತೆ) 9.ಕಿ.ಮೀ,ತೊಡಿಕಾನ- ಪೆರಾಜೆ ಜಿಲ್ಲಾ ಪಂಚಾಯತ್ 11.ಕಿ.ಮೀ ಪೆರಾಜೆ- ಸುಳ್ಯ (ರಾಜ್ಯ ಹೆದ್ದಾರಿ) 7.ಕಿ.ಮೀ ಹೀಗೆ ಒಟ್ಟು 145 ಕಿ.ಮೀ ದೂರವಾಗುತ್ತದೆ.ಈ ಮಾರ್ಗದಲ್ಲಿ ಮಾಚಿಮಲೆ- ಪಟ್ಟಿ- ತೊಡಿಕಾನ ರಸ್ತೆ ಅಭಿವೃದ್ದಿಗೆ 2013- 14ನೇ ಸಾಲಿನಲ್ಲಿ ರಾಜ್ಯ ಸರಕಾರದಿಂದ ರೂ.5 ಕೋಟಿ ಮಂಜೂರುಗೊಂಡಿದೆ. ಕಡತಗಳಿಗೆ ತಾಂತ್ರಿಕ ಒಪ್ಪಿಗೆಗೆ ಬಾಕಿ ಉಳಿದಿದೆ.ಈ ರಸ್ತೆ ಅಭಿವೃದ್ದಿಯಾದಲ್ಲಿ ಸಂಪಾಜೆ-ಮಡಿಕೇರಿ ರಸ್ತೆಗೆ ಪರ್ಯಾಯ ರಸ್ತೆಯಾಗಿ ರೂಪುಗೊಂಡು ಆ ರಸ್ತೆಯ ಮೇಲೆ ಒತ್ತಡ ಕಡಿಮೆ ಆಗುತ್ತದೆ.ಅಲ್ಲದೆ ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರಗಳಾದ ಭಾಗಮಂಡ /ತಲಕಾವೇರಿಯಿಂದ ಸುಬ್ರಹ್ಮಣ್ಯ- ಧರ್ಮಸ್ಥಳಕ್ಕೆ ಪ್ರಯಾಣಿಸಲು ಅತೀ ಹತ್ತಿರದ ರಸ್ತೆಯಾಗಲಿದೆ.ಈ ದಾರಿಯಲ್ಲಿ ಭಾಗಮಂಡಲದಿಂದ ಸುಬ್ರಹ್ಮಣ್ಯಕ್ಕೆ ಈಗಿರುವ ಸುಮಾರು 145 ಕಿ.ಮೀ ದೂರದಿಂದ 50 ಕಿ.ಮೀ ಮಾತ್ರವಾಗುತ್ತದೆ. ಈ ರಸ್ತೆಯು ಸರಕಾರಿ ದಾಖಲೆಗಳಲ್ಲಿ ಕಾವೇರಿ ರಸ್ತೆಯೆಂದು ನಮೂದಿಸಲಾಗಿದೆ. ಭಾಗಮಂಡಲ ಕ್ಷೇತ್ರಕ್ಕೆ ಧಾರ್ಮಿಕ ಮತ್ತು ಪೂಜಾದಿಗಳ ಸಂಬಂಧ ಇರುವ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ,ಪೆರಾಜೆ ಶಾಸ್ತವೇಶ್ವರ ದೇವಸ್ಥಾನ ಆಡೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಿ ಪ್ರಸ್ತಾವಿತ ಭಾಗಮಂಡಲ ತಲಕಾವೇರಿ ಕ್ಷೇತ್ರಗಳ ಅಭಿವೃದ್ದಿಗೆ ಪೂರಕವಾಗಲಿದೆ.ಮುಖ್ಯವಾಗಿ ಮಾಣಿ – ಮೈಸೂರು ರಾಜ್ಯ ಹೆದ್ದಾರಿಗೆ ಒಂದು ಪರ್ಯಾಯ ರಸ್ತೆಯಾಗಿ ರೂಪುಗೊಳ್ಳಲಿದೆ.

Related posts

Leave a Reply