Header Ads
Header Ads
Breaking News

ಜೋಡುಪಾಲ: ಸಂತ್ರಸ್ತರನ್ನು ರಕ್ಷಿಸಿದ ಯುವಕರಿಗೆ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ

ಸಂಕಷ್ಟ ದಲ್ಲಿರುವಾದ ಸಹಾಯಕ್ಕೆ ಧಾವಿಸಿ ಅವರನ್ನು ಜಾತಿ ಧರ್ಮ ನೋಡದೇ ರಕ್ಷಣೆ ಮಾಡುವವರು ಸಮಾಜದ ನಿಜವಾದ ಹೀರೋಗಳು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.ಅವರು ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ದುರಂತದಲ್ಲಿ ಸಂತ್ರಸ್ತರಾದ ನೂರಾರು ಮಂದಿಯನ್ನು ರಕ್ಷಿಸಿದ ಎಸ್‌ಕೆಎಸ್‌ಎಸ್‌ಎಫ್ ಮತ್ತು ಭಜರಂಗದಳದ 16ಮಂದಿ ಯುವಕರಿಗೆ ತೆಕ್ಕಿಲ್ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಧಾನ ಮಾಡಿ ಮಾತನಾಡಿ ಜೋಡುಪಾಲ ದುರಂರದಲ್ಲಿ ಜಾತಿ, ಧರ್ಮ ನೋಡದೆ ಈ ಯುವಕರು ಸುಮಾರು ಇನ್ನೂರಷ್ಟು ಮಂದಿಯ ಪ್ರಾಣ ಉಳಿಸಿದ್ದಾರೆ.

ಇವರೆಲ್ಲಾ ಬಡವರು. ಶ್ರೀಮಂತರಾಗಿರುವವರು ಇಂತಹ ಸೇವೆಗೆ ಬರುವುದಿಲ್ಲ. ಯಾರು ಕೂಡ ಜಾತಿ, ಧರ್ಮದ ಮೂಲಕ ಹೋಗಬಾರದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.ಜೋಡುಪಾಲ ದುರಂತದಲ್ಲಿ ಸಂತ್ರಸ್ತರಾದ ನೂರಾರು ಮಂದಿಯನ್ನು ರಕ್ಷಿಸಿದ ಯುವಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಹಕರಿಸಿದ ಸಂಘ ಸಂಸ್ಥೆಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ವೇಳೆ ರಕ್ಷಣೆ ಸಂದರ್ಭದಲ್ಲಿ ಗಾಯಗೊಂಡ ಬಿಪಿನ್ ಕಲ್ಲುಗುಂಡಿ ಅವರಿಗೆ ೫೦ ಸಾವಿರ ನಗದನ್ನು ನೀಡಿದರು.ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚ್ಚೂರ್ ಮೋನು, ಸದಸ್ಯ ನೂರುದ್ದಿನ್ ಸಾಲ್ಮರ, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply