Header Ads
Breaking News

ಜೋಯ್ ಆಲುಕ್ಕಾಸ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಂಗಳೂರಿನ ಫಳ್ನೀರಿನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜೋಯ್ ಆಲುಕ್ಕಾಸ್ ಆಭರಣ ಮಳಿಗೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜಿನ ವಾಣಿಜ್ಯ ವಿಭಾಗದ ಅಸೋಸಿಯೇಟ್ ಫ್ರೋಫೇಸರ್ ಡಾ ಯತೀಶ್ ಕುಮಾರ್ ಮತ್ತು ಕಾರ್‌ಸ್ಟ್ರೀಟ್ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಹಾಗು ಮಾಹಿತಿ ವಿಜ್ಞಾನದ ಮುಖ್ಯಸ್ಥೆ ಡಾ ಶೈಲಜಾ ರಾಣಿ ಬಿ, ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಗೀತಾ ಜೆನಿಫರ್ ಲೋಬೋ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇದೇ ವೇಳೆ ಮಾತನಾಡಿದ ಡಾ ಯತೀಶ್ ಕುಮಾರ್ ಒಂದನೇ ತರಗತಿಯಿಂದ ಹತ್ತನೇ ತರಗತಿ ಎಂಬುವುದು ಒಂದು ಪ್ರಯಾಣವಿದ್ದಂತೆ. ಇದು ಇಲ್ಲಿಯೇ ಕೊನೆಗೊಳ್ಳುವುದಲ್ಲ. ಹತ್ತನೇ ತರಗತಿ ಪ್ರಮಾಣ ಪತ್ರವು ಜಗತ್ತಿಗೆ ನಮ್ಮನ್ನು ತೋರಿಸುತ್ತದೆ. ಹತ್ತನೇ ತರಗತಿ ಫಲಿತಾಂಶವು ಮುಂದಿನ ವೃತ್ತಿ ಜೀವನಕ್ಕೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

   

ಪ್ರತಿಯೊಂದು ಶಾಲೆಯು ಉತ್ತಮ ಫಲಿತಾಂಶ ಗಳಿಸಲು ತನ್ನ ಉತ್ತಮ ಪ್ರಯತ್ನವನ್ನು ಮಾಡುತ್ತವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಕಠಿಣ ಶ್ರಮವಹಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮಿಂಚಲು ಸಾಧ್ಯ. ಒಂದು ಕಟ್ಟಡ ಗಟ್ಟಿಯಾಗಿ ನಿಲ್ಲಬೇಕಾದರೆ ಅದರ ತಳಪಾಯವು ಗಟ್ಟಿಯಾಗಿರಬೇಕು. ಹತ್ತನೇ ತರಗತಿ ಎಂಬುವುದು ಒಂದು ತಳಪಾಯದಂತೆ. ಮುಂದಿನ ವಿದ್ಯಾಭ್ಯಾಸ ವಿದ್ಯಾರ್ಥಿಗಳಿಗೆ ಹೊಳಪನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸರೋಜಿನಿ ಮಧುಸೂದನ್ ಕುಶೆ, ಸೈಂಟ್ ಜೆರೋಸ, ಸೈಂಟ್ ಆನ್ಸ್, ಕೆನರಾ ಹೈಸ್ಕೂಲ್, ಮಿಲಾಗ್ರೀಸ್ ಹೈಸ್ಕೂಲ್, ನಾರಾಯಣ ಗುರು ಹೈಸ್ಕೂಲ್, ಕೆನರಾ ಹೈಸ್ಕೂಲ್, ಬ್ಯಾರಿಸ್ ಇಂಗ್ಲೀಷ್ ಹೈಸ್ಕೂಲ್‌ನ ಒಟ್ಟು27ವಿದ್ಯಾರ್ಥಿಗಳಿಗೆ ಪದಕ, ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜೋಯ್ ಆಲುಕ್ಕಾಸ್ ಸಂಸ್ಥೆಯ ಮ್ಯಾನೇಜರ್ ಹರೀಶ್ ಕುಮಾರ್, ಸಹಾಯಕ ವ್ಯವಸ್ಥಾಪಕ ವಿರೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply