Header Ads
Breaking News

ಜೋರಾಗಿ ಬೀಸಿದ ಗಾಳಿ ಮಳೆಗೆ ಸಿನಿಮಾ ನಟನ ಮನೆ ಕುಸಿತ: ಭಾರಿ ನಷ್ಟ

ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಿನಿಮಾ ನಟರ ಮನೆಗೆ ಹಾನಿ ಸಂಭವಿಸಿದೆ. ಮಂಜೇಶ್ವರ ಗ್ರಾಮಪಂಚಾಯತ್ ನ ಎರಡನೇ ವಾರ್ಡು ವ್ಯಾಪ್ತಿಯಲ್ಲಿರುವ ತೂಮಿನಾಡು ಎಂಬಲ್ಲಿ ಘಟನೆ ನಡೆದಿದ್ದು, ತುಳು, ಕನ್ನಡ ಸಿನಿಮಾ ನಟ ಹಾಗೂ ರಂಗಭೂಮಿಯ ನಾಟಕ ಕಲಾವಿದನಾಗಿರುವ ಪ್ರಕಾಶ್ ತೂಮಿನಾಡು ಎಂಬವರ ಮನೆಯ ಹಿಂಬದಿಯ ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದಯ ಅಂದಾಜಿಸಲಾಗಿದೆ. ಈ ಸಮಯ ಮನೆಯಲ್ಲಿ ಯಾರೂ ಇಲ್ಲವಾಗಿರುವ ಹಿನ್ನೆಲೆಯಲ್ಲಿ ಭಾರಿ ಒಂದು ಅನಾಹುತ ತಪ್ಪಿ ಹೋಗಿದೆ.

Related posts

Leave a Reply

Your email address will not be published. Required fields are marked *