Header Ads
Breaking News

ಜೋರ್ಮಕ್ಕಿ ಬಾಬು ಶೆಟ್ಟಿ ಕೊಲೆ ಪ್ರಕರಣ : ಆರು ಮಂದಿ ಆರೋಪಿಗಳ ಬಂಧನ

ಕುಂದಾಪುರದ ಹಟ್ಟಿಯಂಗಡಿ ಗ್ರಾ.ಪಂ ವ್ಯಾಪ್ತಿಯ ಕಲ್ಕಂಬ ರಸ್ತೆಯಲ್ಲಿ ನಡೆದ ಜೋರ್ಮಕ್ಕಿ ಬಾಬು ಶೆಟ್ಟಿ ಭೀಕರ ಕೊಲೆ ಪ್ರಕರಣವನ್ನು ಭೇದಿಸಿದ ಕುಂದಾಪುರ ಉಪವಿಭಾಗದ ಎಎಸ್‍ಪಿ ಹರಿರಾಂ ಶಂಕರ್ ನೇತ್ರತ್ವದ ಪೊಲೀಸರ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ (68) ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಶೆಟ್ರಕಟ್ಟೆ ನಿವಾಸಿ ಉದಯ್‍ರಾಜ್ ಶೆಟ್ಟಿ(55) ಕೊಲೆಯ ಸಂಪೂರ್ಣ ಸ್ಕೆಚ್ ಸಿದ್ಧಪಡಿಸಿದ ಕೆಂಚನೂರಿನ ರಮೇಶ್ ಪೂಜಾರಿ (25), ಆನಗಳ್ಳಿ ನಿವಾಸಿ ಪ್ರವೀಣ್ ಪೂಜಾರಿ (25), ಬಸ್ರೂರು ನಿವಾಸಿ ಸಚಿನ್ ಪೂಜಾರಿ (21), ಆನಗಳ್ಳಿ ರಾಘವೇಂದ್ರ ಪೂಜಾರಿ (24) ಬಂಧಿತರು. ಹತ್ತು ದಿನಗಳಿಂದ ಕೊಲೆಗೆ ಸ್ಕೆಚ್ ರೂಪಿಸಿ, ಗೊಬ್ಬರ ವ್ಯವಹಾರ ನಡೆಸುವ ಉದ್ದೇಶದಲ್ಲಿ ಬಾಬು ಶೆಟ್ಟಿ ಅವರನ್ನು ಕನ್ಯಾನ ಜಾಡಿ ಸಮೀಪ ಕಲ್ಕಂಬ ರಸ್ತೆಗೆ ಕರೆಯಿಸಿ ಅಟ್ಟಾಡಿಸಿ ಕೊಲೆ ನಡೆಸಲಾಗಿದೆ.

ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ನಡುವೆ ಮೊದಲಿನಿಂದಲೂ ವೈಮನಸ್ಸಿದ್ದು ಇಬ್ಬರ ನಡುವೆ ಆಗ್ಗಾಗೆ ಗಲಾಟೆ ನಡೆಯುತ್ತಿತ್ತು. ಅಲ್ಲದೇ ನೇರಳಕಟ್ಟೆ ಭಾಗದಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆಯತ್ನ ಪ್ರಕರಣದಲ್ಲಿಯೂ ಕೂಡ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ನಡುವೆ ಘರ್ಷಣೆಯಾಗಿದ್ದು ತೇಜಪ್ಪ ಶೆಟ್ಟಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಬಾಬು ಶೆಟ್ಟಿಯವರನ್ನು ಕೊಲ್ಲಲೇಬೇಕೆಂದು ಸಂಚು ರೂಪಿಸಿದ್ದನು. ಇದಕ್ಕೆ ಸಹಕಾರ ನೀಡಿದವನೇ ಉದಯ್ ರಾಜ್ ಶೆಟ್ಟಿ. ಕೊಲೆ ನಡೆದ ದಿನ ಮಧ್ಯಾಹ್ನ ಬಾಬು ಶೆಟ್ಟಿಗೆ ಕರೆ ಮಾಡಿದ ಆರೋಪಿಗಳು ಗೊಬ್ಬರ ಸಾಗಾಟ ಮಾಡಬೇಕಿದ್ದು ಅದನ್ನು ತೋರಿಸುತ್ತೇವೆ ಬನ್ನಿ ಎಂದಿದ್ದರು. ಅಲ್ಲಿಗೆ ಬೈಕಿನಲ್ಲಿ ಬಂದ ಬಾಬು ಶೆಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎಂದು ಆರೋಪಿಗಳು ಪೊಲೀಸ್ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ ಎಎಸ್ಪಿ ಹರಿರಾಂ ಶಂಕರ್, ಡಿಸಿಐಬಿ ಇನ್ಸ್‍ಪೆಕ್ಟರ್ ಕಿರಣ್, ಕುಂದಾಪುರ ಸರ್ಕಲ್ ಇನ್ಸ್‍ಪೆಕ್ಟರ್ ಡಿ.ಆರ್ ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್‍ಐ ರಾಜಕುಮಾರ್, ಶಂಕರನಾರಾಯಣ ಠಾಣೆ ಪಿಎಸ್‍ಐ ಶ್ರೀಧರ್ ನಾಯ್ಕ್, ಕುಂದಾಪುರ ಪಿಎಸ್‍ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಒಂಬತ್ತು ದಿನದಲ್ಲಿ ಬಂಧಿಸಿದೆ. ಇನ್ನೂ ಕೂಡ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ಸರು ತಿಳಿಸಿದ್ದಾರೆ.
ಕಾವ್ರಾಡಿ ಬಾಬು ಶೆಟ್ಟಿ ಕೊಲೆ ಆಪಾತರ ಮತ್ತೆಮಾಡಿದ ಕುಂದಾಪುರ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದ ಪೊಲೀಸ್ ತಂಡ. ವೃತ್ತ ನಿರೀಕ್ಷಕ ಡಿ.ಬಿ.ಮಂಜಪ್ಪ, ಶಂಕರನಾರಾಯಣ ಎಸ್ಸೈ ಶ್ರೀಧರ ನಾಯ್ಕ್, ಕಂಡ್ಲೂರು ಗ್ರಾಮಾಂತರ ಠಾಣೆ ಎಸ್ಸೈ ರಾಜ ಕುಮಾರ್ ಕಾರ್ಯಾಚರಣೆಯಲ್ಲಿದ್ದರು.

Related posts

Leave a Reply

Your email address will not be published. Required fields are marked *