Header Ads
Breaking News

ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ : ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ತರಬೇತಿ ಶಿಬಿರ

ಭಾರತ್ ಸೇವಕ್ ಸಮಾಜದ ವತಿಯಿಂದ ಬೆಳ್ಳಾರೆ ಮತ್ತು ಸುಳ್ಯದಲ್ಲಿ ನಡೆಸಲ್ಪಡುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ಎರಡು ದಿನಗಳ ತರಬೇತಿ ಶಿಬಿರ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಮಾ.27 ಮತ್ತು ಮಾ. 28 ರಂದು ನಡೆಯಲಿದೆ.

ಮಾ.27 ರಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭದ ಬಳಿಕ ರಂಗ ಕಲಾವಿದ ಮೌನೇಶ್ ವಿಶ್ವಕರ್ಮ ಅವರಿಂದ ರಂಗ ತರಬೇತಿ, ಭಾರತ್ ಸೇವಕ್ ಸಮಾಜದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಸಂಯೋಜಕ ರಘುಕುಮಾರ್ ಪಿ ಅವರಿಂದ ಕಮಿಷನ್ ಕ್ಲಾಸ್, ಅಪರಾಹ್ನ ಉಜಿರೆ ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಅವರಿಂದ ಪ್ರೇರಣಾ ಕೌಶಲ್ಯ ತರಬೇತಿ, ಶಿಕ್ಷಕ, ಕಾರ್ಯಕ್ರಮ ನಿರೂಪಕ ಲಿಂಗಪ್ಪ ಬೆಳ್ಳಾರೆ ಅವರಿಂದ ಸಭಾ ಕಾರ್ಯಕ್ರಮ ನಿರ್ವಹಣಾ ತರಬೇತಿ, ನೆನಪಿನ ಪರೀಕ್ಷೆ, ಮಹಿಳೆ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಾ.28ರಂದು ಬೆಳಿಗ್ಗೆ ಯೋಗ ಮತ್ತು ಪ್ರಾಣಾಯಮ ತರಗತಿ ಬಳಿಕ ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ ತರಬೇತಿ, ನಡೆಯಲಿದೆ. ಅಪರಾಹ್ನ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ.

Related posts

Leave a Reply

Your email address will not be published. Required fields are marked *