Header Ads
Breaking News

ಜ್ಯೋತಿ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತವೆಂದು ಬದಲಿಸಬೇಕೆಂದು ಬಸ್‍ಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ

ಮಂಗಳೂರಿನಲ್ಲಿರುವ ಜ್ಯೋತಿ ವೃತ್ತವನ್ನು ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ಬದಲಿಸಬೇಕೆಂದು ಎಸ್‍ಟಿ, ಎಸ್‍ಸಿ ಕುಂದುಕೊರತೆ ಸಭೆಯಲ್ಲಿ ನಿರ್ಣಯಿಸಿದಂತೆ ಇಂದು ಡಿಸಿಪಿ, ಎಸಿಪಿ, ಬಸ್ ಮಾಲಕರ ಸಂಘದ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಖಾಸಗಿ ಬಸ್‍ಗಳಿಗೆ ಸ್ಟಿಕ್ಕರಿಂಗ್ ಅಂಟಿಸುವ ಕಾರ್ಯಕ್ರಮ ನಡೆಯಿತು.


ಈ ಬಗ್ಗೆ ಮಾತನಾಡಿದ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ದಿಲ್‍ರಾಜ್ ಆಳ್ವ ಅವರು. ಜ್ಯೋತಿ ವೃತ್ತದ ಬದಲು ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ಬದಲಾಯಿಸಬೇಕು ಎಂದು ನಿರಂತರವಾಗಿ ಬೇಡಿಕೆಗಳನ್ನು ಇಡುತ್ತಿದ್ದರು.. ಈ ಬಗ್ಗೆ ಬಸ್‍ನ ಮಾಲಕರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲಿ. ಇದಿಗ ಬಸ್ ಮಾಲಕರ ಸಂಘದ ನೇತೃತ್ವದಲ್ಲಿ ಡಿಸಿಪಿ, ಎಸಿಪಿ, ಬಸ್ ಮಾಲಕರ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿಕೊಂಡು ಬಸ್‍ನಲ್ಲಿ ಸ್ಟಿಕ್ಕರನ್ನು ಅಂಟಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *